ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಿಂದ ಜಪ್ತಿ ಮಾಡಿದ್ದ ಗಾಂಜಾವನ್ನೇ ಪೊಲೀಸರೇ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನವನಗರ ಇನ್ಸ್ ಪೆಕ್ಟರ್ ಸೇರಿ 7 ಮಂದಿ ಅಮಾನತು ಮಾಡಲಾಗಿದೆ.
ನವನಗರ ಇನ್ಸ್ಪೆಕ್ಟರ್ ವಿಶ್ವನಾಥ್ ಚೌಗಲೆ, ಎಎಸ್ಐ ಕರಿಯಪ್ಪಗೌಡರ, ಹೆಚ್ ಸಿ ನಾಗರಾಜ ಗುಡಿಮಾನಿ ವಿಕ್ರಮ್ ಪಾಟೀಲ್, ಶಿವಕುಮಾರ್ ಮೇತ್ರಿ ಮತ್ತು ಗೋಕುಲ ಠಾಣೆಯ ಹೆಚ್ ಸಿ ದಿಲ್ಶಾದಾ, ಎಂ ಸಿ ಹೊನ್ನಪ್ಪರನ್ನು ಅಮಾನತುಗೊಂಡವರು
ಪೋಲಿಸ್ ಠಾಣೆಯಲ್ಲಿ ಜಪ್ತಿ ಮಾಡಿ ಇಡಲಾಗಿದ್ದ ಪೋಲಿಸರೇ ಗಾಂಜಾ ಮಾರಾಟ ಮಾಡಿರುವುದು ಕಂಡುಬಂದ ಹಿನ್ನೆಲೆ ಕಮಿಷನರ್ ಲಾಭೂರಾಮ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ನವನಗರ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಇತ್ತೀಚೆಗೆ ಬಂಧಿಸಿದ್ದರು. ಈ ವೇಳೆ ಆರೋಪಿ ಗಾಂಜಾ ಮಾರಾಟ ಮಾಡುತ್ತಿದ್ದ ವಾಹನ ಸೇರಿದಂತೆ 1.5 ಕೆಜಿ ಗಾಂಜಾ ಕೂಡ ವಶಕ್ಕೆ ಪಡೆದುಕೊಂಡಿದ್ದರು. ಆದರೆ ವಶಕ್ಕೆ ಪಡೆದ ಗಾಂಜಾ ಜೊತೆಗೆ ಕೃತ್ಯಕ್ಕೆ ಬಳಸಿದ್ದ ವಾಹನ ಬಿಡಲು ಪೊಲೀಸರು ಹಣ ಕೇಳಿದ್ದರು ಎನ್ನಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು