ಬೆಂಗಳೂರು, ಮಾರ್ಚ್ 07: ರಾಜ್ಯದ 20 ಜಿಐ (Geographical Indication) ಟ್ಯಾಗ್ ಹೊಂದಿರುವ ಬೆಳೆಗಳು ಮತ್ತು ಇತರ ದೇಸಿ ತಳಿಗಳು ಕಣ್ಮರೆಯಾಗುವುದನ್ನು ತಪ್ಪಿಸಲು, ದೇಸಿ ತಳಿಗಳ ಬೀಜ ಬ್ಯಾಂಕ್ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅಡಿಕೆ ಬೆಳೆ ರಕ್ಷಣೆಗಾಗಿ ವಿಶೇಷ ಅನುದಾನ
ಈ ವರ್ಷದ ಬಜೆಟ್ ಮಂಡನೆ ವೇಳೆ, ಮಲೆನಾಡು ಜಿಲ್ಲೆಗಳ ಎಲೆಚುಕ್ಕಿ ರೋಗದಿಂದ 2 ಲಕ್ಷಕ್ಕೂ ಹೆಚ್ಚು ಅಡಿಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿರುವುದರಿಂದ, ಈ ರೋಗ ನಿಯಂತ್ರಣಕ್ಕಾಗಿ ₹62 ಕೋಟಿ ಅನುದಾನ ಒದಗಿಸಲಾಗುವುದು ಎಂದು ಘೋಷಿಸಲಾಯಿತು.
ತೆಂಗು ಬೆಳೆಯನ್ನು ಹಾಳುಮಾಡುತ್ತಿರುವ ಕಪ್ಪುತಲೆ ಹುಳು ನಿಯಂತ್ರಣಕ್ಕೆ ವೈಜ್ಞಾನಿಕ ಸಮೀಕ್ಷೆ ನಡೆಸಿ, ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತೋಟಗಾರಿಕೆಗೆ ಪ್ರೋತ್ಸಾಹ
ಹನಿ ನೀರಾವರಿ ಯೋಜನೆ: 52 ಸಾವಿರ ರೈತರಿಗೆ ₹426 ಕೋಟಿ ಸಹಾಯಧನ ಒದಗಿಸಲಾಗುವುದು.
ಗದಗ ಜಿಲ್ಲೆಯ ಡಂಬಳದಲ್ಲಿ ತೋಟಗಾರಿಕಾ ಕಾಲೇಜು: ತಜ್ಞರಿಂದ ಕಾರ್ಯಸಾಧ್ಯತಾ ವರದಿ ಪಡೆದು ಈ ಬಗ್ಗೆ ತೀರ್ಮಾನಿಸಲಾಗುವುದು.
ಬ್ಯಾಡಗಿ ಮೆಣಸಿನಕಾಯಿ ಸಂರಕ್ಷಣೆ: ಎಲೆರೋಗ ತ್ರಿಬ್ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ ನಡೆಸಲಾಗುವುದು.
ತೋಟಗಾರಿಕಾ ಬೆಳೆಗೆ ಜ್ಞಾನಕೋಶ ಮತ್ತು ಹೊಸ ಯೋಜನೆ
ನೈಜ ಸಮಯದ ಆಧಾರದ ಮೇಲೆ ರೈತರಿಗೆ ಮಾಹಿತಿ ನೀಡಲು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಟೆಕ್ನಾಲಜಿ ಮತ್ತು ಖಾಸಗಿ ಸಹಯೋಗದಲ್ಲಿ ಜ್ಞಾನಕೋಶ ಸ್ಥಾಪನೆ ನಡೆಯಲಿದೆ.ಇದನ್ನು ಓದಿ –ಬೆಂಗಳೂರು ಸುರಂಗ ರಸ್ತೆ ಯೋಜನೆಗೆ ₹40,000 ಕೋಟಿ ಅನುದಾನ
ಇದಲ್ಲದೆ, ತೋಟಗಾರಿಕಾ ಯೋಜನೆ-2 ಜಾರಿಗೆ ತರುವಂತೆ ₹95 ಕೋಟಿ ಅನುದಾನ ಘೋಷಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು