January 11, 2025

Newsnap Kannada

The World at your finger tips!

vijayavada

ಗಂಡನ ಜೊತೆ ಗೆಳತಿಯ ಫೋಟೋ ಸ್ಟೇಟಸ್ ನೋಡಿ ಪತ್ನಿ ಆತ್ಮಹತ್ಯೆ!

Spread the love

ಆತ್ಮೀಯ ಗೆಳತಿ ಗಂಡನೊಂದಿಗೆ ಗಾಢವಾದ ಸ್ನೇಹ ಹೊಂದಿದ್ದ ಸಂಗತಿ ವಾಟ್ಸ್ ಆಪ್ ಸ್ಟೇಟಸ್ ನಿಂದ ತಿಳಿದುಕೊಂಡ ಮಹಿಳೆಯೊಬ್ಬಳು ನೇಣುಬಿಗಿದು‌ ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯವಾಡ ದಲ್ಲಿ ಜರುಗಿದೆ.

ಈವೆಂಟ್​ ಡ್ಯಾನ್ಸರ್​ ಗಾಯತ್ರಿ ಎಂಬಾಕೆ ವಿಜಯವಾಡದ ವಂಬೆ ಕಾಲನಿಯಲ್ಲಿರುವ ತನ್ನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ಘಟನೆಗೆ ತನ್ನ ಆತ್ಮೀಯ ಮತ್ತೊಬ್ಬ ಡ್ಯಾನ್ಸರ್ ಗೆಳತಿ ಮಾಡಿದ ದ್ರೋಹ ಕಾರಣ ಎನ್ನಲಾಗಿದೆ.

ವಂಬೆ ಕಾಲನಿಯ ಬನ್ನಿ ಡ್ಯಾನ್ಸ್​ ಟ್ರೂಪ್​ನಲ್ಲಿ ಡ್ಯಾನ್ಸರ್​ ಆಗಿ ಕೆಲಸ ಮಾಡುತ್ತಿದ್ದ ಗಾಯತ್ರಿ ,, ಸಂತೋಷ್​ ಎಂಬಾತನನ್ನು ಪ್ರೀತಿಸಿ ಕೆಲವು ವೇಳೆ ವರ್ಷಗಳ ಹಿಂದೆ ಮದುವೆಯಾಗಿದ್ದಳು. ಇಬ್ಬರ ವೈವಾಹಿಕ ಜೀವನ ಸಾಕ್ಷಿಯಾಗಿ ಇಬ್ಬರು ಮಕ್ಕಳು ಸಹ ಇದ್ದರು.

ಬನ್ನಿ ಪತ್ನಿ ನೀಲಿಮಾ ಸಹ ಡ್ಯಾನ್ಸರ್​ ಆಗಿದ್ದಳು. ಗಾಯತ್ರಿ ಮತ್ತು ನೀಲಿಮಾ ಇಬ್ಬರು ಸಹ ಒಳ್ಳೆಯ ಸ್ನೇಹಿತೆಯರಾಗಿದ್ದರು. ಬರು ಬರುತ್ತಾ ಬನ್ನಿ ಮತ್ತು ಗಾಯತ್ರಿ ನಡುವೆ ವಿವಾಹೇತರ ಸಂಬಂಧ ಬೆಳೆಯ ತೊಡಗಿತು.

ಇತ್ತೀಚೆಗಷ್ಟೇ ಗಾಯತ್ರಿ, ಬನ್ನಿ ಜತೆಗಿರುವ ಫೋಟೋವನ್ನು ತನ್ನ ವಾಟ್ಸ್​ಆಯಪ್​ ಸ್ಟೇಟಸ್​ನಲ್ಲಿ ಶೇರ್​ ಮಾಡಿಕೊಂಡಿದ್ದಳು.

ಅದನ್ನು ನೋಡಿ ಬನ್ನಿ ಪತ್ನಿ ನೀಲಿಮಾ, ಗಾಯತ್ರಿ ಮನೆಗೆ ಧಾವಿಸಿದ್ದಾಳೆ. ಇದೇ ವಿಚಾರವಾಗಿ ಇಬ್ಬರ ನಡುವೆಯೂ ಜಗಳವೂ ನಡೆದು ನೀಲಿಮಾ ಮನೆಯಿಂದ ಹೊರನಡೆದ ಬೆನ್ನಲ್ಲೇ ಗಾಯತ್ರಿ ನೇಣಿಗೆ ಶರಣಾದಳು.

ನೀಲಿಮಾ ಮನೆಗೆ ಬಂದಾಗ ಗಾಯತ್ರಿ ಗಂಡ ಸತೀಶ್​ ತನ್ನೆರೆಡು ಮಕ್ಕಳನ್ನು ಕರೆದುಕೊಂಡು ಹೊರ ಹೋಗಿದ್ದ. ಸತೀಶ್​ ಮನೆಗೆ ಮರಳಿದಾಗ ಬಾಗಿಲು ಹಾಕಿರುವುದನ್ನು ನೋಡಿ ತವರಿಗೆ ಹೋಗಿರಬಹದು ಅಂದುಕೊಂಡಿದ್ದಾನೆ. ಆದರೆ, ಕಿಟಕಿಯನಲ್ಲಿ ಇಣುಕಿ ನೋಡಿದಾಗ ಗಾಯತ್ರಿ ನೇಣು ಹಾಕಿಕೊಂಡಿರುವ ಬೆಳಕಿಗೆ ಬಂದಿದೆ. ಬಳಿಕ ಬಾಗಿಲ ಒಡೆದು ಒಳಗೆ ನುಗ್ಗಿದ್ದಾರೆ.

ಗಾಯತ್ರಿ ಮನೆಗೆ ಬಂದಿದ್ದ ನೀಲಿಮಾ ಆಕೆಯನ್ನು ಹಿಗ್ಗಾಮುಗ್ಗ ಬೈದು, ಹೀಯಾಳಿಸಿದ್ದಾಳೆ. ಅದೇ ನೋವಿನಲ್ಲಿ ಗಾಯತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಕರಣ ದಾಖಲಾಗಿದ್ದು, ಗಾಯತ್ರಿ ಮೊಬೈಲ್​ ಫೋನ್​ ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ.

Copyright © All rights reserved Newsnap | Newsever by AF themes.
error: Content is protected !!