January 15, 2025

Newsnap Kannada

The World at your finger tips!

saravan

ಪಕ್ಷೇತರ ಅಭ್ಯರ್ಥಿಯ ಪ್ರಣಾಳಿಕೆ ನೋಡಿ: ಗೆದ್ದರೆ ಚಂದ್ರಲೋಕಕ್ಕೆ ಟ್ರಿಪ್, ಮನೆಗೊಂದು ಹೆಲಿಕಾಪ್ಟರ್, 1 ಕೋಟಿ ಕ್ಯಾಷ್

Spread the love

ತಮಿಳುನಾಡಿನಲ್ಲಿ ಚುನಾವಣೆ ಅಬ್ಬರ ಹೆಚ್ಚಾಗಿದೆ. ಪತ್ರಕರ್ತ ಕಂ ಪಕ್ಷೇತರ ಅಭ್ಯರ್ಥಿ 33 ವರ್ಷದ ಸರವಣನ್ ಅವರು ಬಿಡುಗಡೆ ಮಾಡಿರುವ ಪ್ರಣಾಳಿಕೆ ಎಲ್ಲರನ್ನೂ ಅಚ್ಚರಿ‌‌ ಮೂಡಿಸಿದೆ.

ಮಧುರೈ ದಕ್ಷಿಣ ಕ್ಷೇತ್ರದಿಂದ ತುಲಮ್ ಸರವಣನ್ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ.

ಕಸದ ಬುಟ್ಟಿ‌ ಇವರ ಚಿಹ್ನೆ :

ಇತರ ಅಭ್ಯರ್ಥಿಗಳಿಗಿಂತ ತುಂಬಾನೇ ವಿಭಿನ್ನವಾದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಸದ್ಯ ಈ ಚುನಾವಣಾ ಪ್ರಣಾಳಿಕೆ ತಮಿಳುನಾಡಿನಲ್ಲಿ ಭಾರೀ ಸದ್ದು ಮಾಡುತ್ತಿದೆ. ಇವರ ಚುನಾವಣಾ ಚಿಹ್ನೆ ‘ಕಸದ ಬುಟ್ಟಿ’ಯಾಗಿದೆ.

ಪ್ರಣಾಳಿಕೆ ಹೇಗಿದೆ ? :

ನಾನು ಗೆದ್ದು ಬಂದರೆ ಮಿನಿ ಹೆಲಿಕಾಪ್ಟರ್, ಪ್ರತಿ ಮನೆಗೂ ವರ್ಷಕ್ಕೆ 1 ಕೋಟಿ, ಮದುವೆಗಳಿಗೆ ಚಿನ್ನಾಭರಣ, ಮೂರು ಮಹಡಿಯ ಮನೆ ನೀಡುತ್ತೇನೆ. ಅಲ್ಲದೆ ಚಂದ್ರನಲ್ಲಿಗೆ ಪ್ರವಾಸ ಹೋಗಲು ಅನುಕೂಲ ಮಾಡಿಕೊಡುತ್ತೇನೆ ಎಂದು ಹೇಳುವ ಮೂಲಕ ಮತದಾರರ ಅಂಗೈಯಲ್ಲಿ ಚಂದ್ರನನ್ನು ತೋರಿಸಿದ್ದಾರೆ.

ಇಷ್ಟು ಮಾತ್ರವಲ್ಲದೆ ಬೇಸಿಗೆಯ ಬಿಸಿಲನ್ನು ನಿಯಂತ್ರಿಸಲು ತಮ್ಮ ಕ್ಷೇತ್ರದಲ್ಲಿ 300 ಅಡಿ ಎತ್ತರದ ಕೃತಕ ಮಂಜುಗಡ್ಡೆಯನ್ನೇ ನಿರ್ಮಿಸುತ್ತೇನೆ. ಗೃಹಿಣಿಯರಿಗೆ ಮನೆಕೆಲಸದಲ್ಲಿ ಸಹಾಯ ಮಾಡಲು ರೋಬೋಟ್, ಪ್ರತಿ ಮನೆಗೆ ದೋಣಿ ನೀಡುತ್ತೇನೆ. ಮದುವೆಯಾಗದೆ ಇದ್ದ ಯುವಕರು ತಮ್ಮ ವೃದ್ಧ ಪೋಷಕರೊಂದಿಗೆ ಇದ್ದರೆ ಅಂತವರಿಗೂ ಸಹಾಯ ಮಾಡುತ್ತೇನೆ. ಹೀಗೆ ಅನೇಕ ಆಶ್ವಾಸನೆಗಳನ್ನು ನೀಡುವ ಮೂಲಕ ಮತದಾರರ ಗಮನ ಸೆಳೆಯುವಂತೆ ಮಾಡಿದ್ದಾರೆ.

ಯಾವ ಪ್ರಣಾಳಿಕೆ ಭರವಸೆಯನ್ನು ರಾಜಕೀಯ ಪಕ್ಷಗಳು ಇದುವರೆಗೂ ಈಡೇರಿಸಿಲ್ಲ.‌ ಆದರೂ ಮತದಾರರು ಪ್ರತಿ ಚುನಾವಣೆ ಯಲ್ಲಿ ಮೋಸ ಹೋಗುತ್ತಲೇ ಇದ್ದಾರೆ. ಜನರಲ್ಲಿ ಡೋಂಗಿ ಆಶ್ವಾಸನೆ ನಂಬದಂತೆ ಮಾಡಲು ಇಂತಹ‌ ಆಶ್ವಾಸನೆ ಪ್ರಣಾಳಿಕೆ ಯನ್ನು ಬಿಡುಗಡೆ ಮಾಡಿದ್ದೇನೆ ಎನ್ನುತ್ತಾರೆ ಸರವಣನ್.‌

Copyright © All rights reserved Newsnap | Newsever by AF themes.
error: Content is protected !!