75 ಲಕ್ಷ ರು ನಗದು ಸಾಗಿದ್ದ ಕಸ್ಟಮ್ಸ್ ಅಧಿಕಾರಿ ದಂಪತಿಗಳು ಭದ್ರತಾ ಪಡೆ ವಶಕ್ಕೆ

Team Newsnap
1 Min Read

ಸಿಕ್ಕಿ ಹಾಕಿಕೊಳ್ಳುತ್ತೇವೆ ಎಂಬ‌ ಭಯ‌ದಿಂದ ಕಸ್ಟಮ್ಸ್ ಅಧಿಕಾರಿ ದಂಪತಿಗಳು ಸಾಗಿಸುತ್ತಿದ್ದ 75 ಲಕ್ಷ ರು ನಗದು ಹಾಗೂ ಚಿನ್ನಾಭರಣವನ್ನು,ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಇರ್ಪಾನ್ ದಂಪತಿಗಳು ಬೆಂಗಳೂರು ಮೂಲಕ ಲಖನೌ ಗೆ ಪ್ರಯಾಣ ಮಾಡಲಿದ್ದರು. ಈ ಅಧಿಕಾರಿಯ ಪತ್ನಿ ಬಾತ್ ರೂಂನಲ್ಲಿ 10 ಲಕ್ಷ ರುಪಾಯಿ ಬಿಸಾಡಿದ್ದೂ ಸೇರಿ ಒಟ್ಟಾರೆ ದಂಪತಿ ಬಳಿಯಿಂದ ಬರೋಬ್ಬರಿ 75 ಲಕ್ಷ ರು ಗಳನ್ನು ಸಿಐಎಸ್‌ಎಫ್ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ತಂಡ ಚೆನ್ನೈನಲ್ಲಿ ಕಸ್ಟಮ್ಸ್ ಅಧಿಕಾರಿಯಾಗಿರುವ ಮೊಹಮ್ಮದ್ ಇರ್ಫಾನ್ ಅಹ್ಮದ್ ಹಾಗೂ ಪತ್ನಿ ಬಳಿ ತಪಾಸಣೆ ಮಾಡಿದ ವೇಳೆ ಈ ವೇಳೆ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ.

ಈ ದಾಳಿಯಿಂದ ಅಧಿಕಾರಿ ಪತ್ನಿ ತಪ್ಪಿಸಿಕೊಳ್ಳಲು ತನ್ನ ಬಳಿಯಿದ್ದ 10 ಲಕ್ಷ ರುಗಳನ್ನು ಬಾತ್ ರೂಂನಲ್ಲಿ ಬಿಸಾಡಿದ್ದಾರೆ. ಆ ಹಣವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ಸಿಐಎಸ್‌ಎಫ್ ಅಧಿಕಾರಿಗಳು ದಂಪತಿಯಿಂದ ಎರಡು ದುಬಾರಿ ಮೌಲ್ಯದ ಮೊಬೈಲ್, ಆ್ಯಪಲ್ ವಾಚ್, ಚಿನ್ನಾಭರಣ, 74 ಲಕ್ಷದ 81 ಸಾವಿರ 500 ರು ನಗದನ್ನು ಜಪ್ತಿ ಮಾಡಲಾಗಿದೆ.

ಈ ಪ್ರಕರಣದ ತನಿಖೆಯನ್ನು ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

Share This Article
Leave a comment