ಮೇ.24ರಿಂದ ಜೂನ್ 16ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ : ಅಂತಿಮ ವೇಳಾ ಪಟ್ಟಿ ಪ್ರಕಟ

Newsnap Team
1 Min Read

ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ.

ಮೇ.24ರಿಂದ ಜೂನ್ 16ರವರೆಗೆ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ನಿಗದಿಪಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ದ್ವಿತೀಯ ಪಿಯುಸಿ ಅಂತಿಮ ವಾರ್ಷಿಕ ವೇಳಾಪಟ್ಟಿ ಬಿಡುಗಡೆ ಮಾಡಿದ ಸಚಿವರು , ಈಗಾಗಲೇ ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಬಂದಂತ ಮಾಹಿತಿಯನ್ನು ಆಧರಿಸಿ, ಇದೀಗ ಮೇ 24ರಿಂದ ಜೂನ್ 16ರವರೆಗೆ ನಡೆಸಲು ಉದ್ದೇಶಿಸಲಾಗಿದೆ ಎಂದರು.

ದ್ವಿತೀಯ ಪಿಯುಸಿ ಪರೀಕ್ಷಾ ಅಂತಿಮ ವೇಳಾಪಟ್ಟಿ:

  • ಮೇ.24, ಇತಿಹಾಸ
  • ಮೇ.26, ಭೂಗೋಳ ಶಾಸ್ತ್ರ
  • ಮೇ.31, ಇಂಗ್ಲೀಷ್
  • ಜೂನ್.2, ರಾಜ್ಯಶಾಸ್ತ್ರ
  • ಜೂನ್.3, ಜೀವಶಾಸ್ತ್ರ
  • ಜೂನ್.4, ಅರ್ಥಶಾಸ್ತ್ರ
    *ಜೂನ್.7, ವ್ಯವಹಾರ ಅಧ್ಯಯನ, ಭೌತಶಾಸ್ತ್ರ
  • ಜೂನ್.10, ಸಮಾಜಶಾಸ್ತ್ರ, ರಾಸಾಯನಶಾಸ್ತ್ರ
  • ಜೂನ್.12, ಸಂಖ್ಯಾಶಾಸ್ತ್ರ
  • ಜೂನ್.14, ಲೆಕ್ಕಶಾಸ್ತ್ರ, ಗಣಿತ ಪರೀಕ್ಷೆ
  • ಜೂನ್.16, ಕನ್ನಡ (ಪ್ರಥಮ ಭಾಷೆ)
Share This Article
Leave a comment