January 10, 2025

Newsnap Kannada

The World at your finger tips!

varthur prakash

ಸೆಕೆಂಡ್ ವೈಫ್, ಆಕೆಯ ಮೊದಲ ಗಂಡನ ಮಗ ವರ್ತೂರು ಕಿಡ್ನ್ಯಾಪ್ ಸೂತ್ರದಾರರು ?

Spread the love

ಮಾಜಿ ಮಂತ್ರಿ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಪ್ರಕರಣಕ್ಕೆ ಮತ್ತೆ ಹೊಸ ತಿರುವು ಸಿಗುತ್ತಿದೆ .

ಈ ಅಪಹರಣದ ಹಿಂದೆ ಎರಡನೇ ಪತ್ನಿ ಹಾಗೂ ಆಕೆಯ ಮೊದಲ ಗಂಡನ ಪುತ್ರನ ಕೈವಾಡವೂ ಎಂಬ ಸಂಶಯ ಪೋಲೀಸರನ್ನು ಕಾಡುತ್ತಿದೆ.

ಪ್ರಕಾಶ್ ಅಪಹರಣ ತನಿಖೆ ವೇಳೆ ಸಾಕಷ್ಟು ಸಂಶಯಗಳು ಎದುರಾಗಿವೆ. ಈ ನಡುವೆ ಹೊಸದೊಂದು ಸಂಗತಿ ಅನುಮಾನ ಹುಟ್ಟಿಸಿದೆ.

ಈ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.‌ಎರಡನೇ ಹೆಂಡತಿ ಮತ್ತು ಆಕೆಯ ಮೊದಲ ಗಂಡನ ಪುತ್ರ ಸೇರಿ ವರ್ತೂರು ಪ್ರಕಾಶ್ ಅವರನ್ನು ಅಪಹರಣ ಮಾಡಿಸಿರಬಹುದು ಎನ್ನುವ ಅನುಮಾನಕ್ಕೆ ಸಾಕ್ಷಿ ಹುಡುಕುತ್ತಿದ್ದಾರೆ.

ವರ್ತೂರು ಪ್ರಕಾಶ್ ರ ಮೊದಲ ಪತ್ನಿ ಡೆಂಗ್ಯೂನಿಂದ 2017 ತೀರಿಕೊಂಡರು. ಆಗ ಪ್ರಕಾಶ್ ತಮ್ಮ ತೋಟದ ಮನೆ ನೋಡಿಕೊಳ್ಳುತ್ತಿದ್ದ ಮಹಿಳೆಯನ್ನೇ ವಿವಾಹವಾದರು.

ಪ್ರಕಾಶ್ ಗೆ ಮೊದಲೇ ಹೆಂಡತಿ ಇಬ್ಬರು ಗಂಡು ಮಕ್ಕಳಿದ್ದ ಕಾರಣ ಆಸ್ತಿ ವಿವಾದ ಇತ್ತು. ಫಾರ್ಮ್ ಹೌಸ್ ಬೇರೆಯವರಿಗೆ ಕೊಡುವ ನಿರ್ಧಾರಕ್ಕೆ ಬರಲಾಗಿತ್ತು. ಆ ಕಾರಣಕ್ಕಾಗಿ ಎರಡನೇ ಪತ್ನಿ ಹಾಗೂ ಆಕೆಯ ಮೊದಲ ಪತಿಯ ಮಗ ಸೇರಿ ಅಪಹರಣ ಮಾಡಿಸಿರಬಹುದು ಎಂಬ ಅನುಮಾನ ಪೋಲೀಸರನ್ನು ತೀವ್ತವಾಗಿ ಕಾಡುತ್ತಿದೆ.

ಈ ನಡುವೆ ಕಾರಿನಲ್ಲಿ ಸಿಕ್ಕ ವೇಲ್ ಯಾರದ್ದು? ಹುಡುಗಿಯ ಡ್ರೆಸ್ ಎಲ್ಲಿಂದ ಬಂತು? ಹನಿ ಟ್ರ್ಯಾಪ್ ಗೆ ಬಲಿಯಾಗಿದ್ದು ನಿಜವೆ ಎಂಬ ಹಲವಾರು ಅಂಶಗಳನ್ನು ಪೋಲೀಸರು ತುಂಬಾ ಆಳವಾಗಿ ತನಿಖೆ ಮಾಡುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!