2020-21ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಮೇ 24 ರಿಂದ ಜೂನ್ 16 ರ ತನಕ ನಡೆಸಲು ನಿರ್ಧರಿಸಲಾಗಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ತಿದ್ದುಪಡಿಗೊಳಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹಿಂದಿನ ವೇಳಾಪಟ್ಟಿಗೆ ಹಲವು ಆಕ್ಷೇಪಣೆಗಳು ಬಂದ ಕಾರಣ ಹೊಸ ವೇಳಾಪಟ್ಟಿ ನೀಡುತ್ತಿರುವುದಾಗಿ ಇಲಾಖೆ ತಿಳಿಸಿದೆ.
ನೂತನ ವೇಳಾಪಟ್ಟಿಯ ಪ್ರಕಾರ 24-05-2021ರಿಂದ 16-06-2021ರ ತನಕ ಪರೀಕ್ಷೆಗಳು ನಡೆಯಲಿವೆ.
ಯಾವ ದಿನ ಯಾವ ಪತ್ರಿಕೆ?
ಮೇ 24, ಸೋಮವಾರ: ಇತಿಹಾಸ
ಮೇ 25, ಮಂಗಳವಾರ: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಮೇ 26, ಬುಧವಾರ: ಭೂಗೋಳಶಾಸ್ತ್ರ
ಮೇ 27, ಗುರುವಾರ: ಮನಃಶಾಸ್ತ್ರ, ಬೇಸಿಕ್ ಗಣಿತ
ಮೇ 28, ಶುಕ್ರವಾರ: ತರ್ಕಶಾಸ್ತ್ರ
ಮೇ 29, ಶನಿವಾರ: ಕನ್ನಡ
ಮೇ 31, ಸೋಮವಾರ: ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ
ಜೂನ್ 1, ಮಂಗಳವಾರ: ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ಕೇರ್, ಬ್ಯೂಟಿ ಮತ್ತು ವೆಲ್ನೆಸ್ (NSQF)
ಜೂನ್ 2, ಬುಧವಾರ: ರಾಜ್ಯಶಾಸ್ತ್ರ, ಗಣಕ ವಿಜ್ಞಾನ
ಜೂನ್ 3, ಗುರುವಾರ: ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್
ಜೂನ್ 4, ಶುಕ್ರವಾರ: ಅರ್ಥಶಾಸ್ತ್ರ
ಜೂನ್ 5, ಶನಿವಾರ: ಗೃಹವಿಜ್ಞಾನ
ಜೂನ್ 7, ಸೋಮವಾರ: ವ್ಯವಹಾರ ಅಧ್ಯಯನ, ಭೌತಶಾಸ್ತ್ರ
ಜೂನ್ 8, ಮಂಗಳವಾರ: ಭೂಗರ್ಭಶಾಸ್ತ್ರ
ಜೂನ್ 9, ಬುಧವಾರ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
ಜೂನ್ 10, ಗುರುವಾರ: ಸಮಾಜಶಾಸ್ತ್ರ, ರಸಾಯನ ಶಾಸ್ತ್ರ
ಜೂನ್ 11, ಶುಕ್ರವಾರ: ಉರ್ದು, ಸಂಸ್ಕೃತ
ಜೂನ್ 12, ಶನಿವಾರ: ಸಂಖ್ಯಾಶಾಸ್ತ್ರ
ಜೂನ್ 14, ಸೋಮವಾರ: ಐಚ್ಛಿಕ ಕನ್ನಡ
ಜೂನ್ 15, ಮಂಗಳವಾರ: ಹಿಂದಿ
ಜೂನ್ 16, ಬುಧವಾರ: ಇಂಗ್ಲೀಷ್
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ