February 22, 2026

Newsnap Kannada

The World at your finger tips!

kuruburu shanth

ಸೆ. 27 ರಂದು ಕರ್ನಾಟಕ ಬಂದ್: ಕುರುಬೂರು ಶಾಂತಕುಮಾರ್

Spread the love

ಕರ್ನಾಟಕ ಸಂಯಕ್ತ ಕಿಸಾನ್ ಮೋರ್ಚಾದಿಂದ ಸೆಪ್ಟೆಂಬರ್ 27 ರಂದು “ಕರ್ನಾಟಕ ಬಂದ್’ಗೆ ಕರೆ ನೀಡಲಾಗಿದೆ ಎಂದು ಮೋರ್ಚಾದ ಮುಖ್ಯಸ್ಥ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.


ಮೈಸೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಸೆ. 27 ರಂದು “ಭಾರತ್ ಬಂದ್’ ಕರೆ ನೀಡಲಾಗಿದೆ. ಆದ್ದರಿಂದ ಅಂದು ರಾಜ್ಯದಲ್ಲೂ ಬಂದ್ ನಡೆಯಲಿದೆ ಎಂದರು.


ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ, ಅಡುಗೆ ಅನಿಲ, ಇಂಧನ ದರ ಹಾಗೂ ರಸಗೊಬ್ಬರ ಬೆಲೆ ಇಳಿಕೆ ಮಾಡಬೇಕೆಂದು ಒತ್ತಾಯಿಸಿ ಬಂದ್‌ಗೆ ಕರೆ ನೀಡಲಾಗಿದೆ. ದೇಶದ 500 ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ ಎಂದು ವಿವರಿಸಿದರು.

error: Content is protected !!