February 21, 2026

Newsnap Kannada

The World at your finger tips!

davod

ದಾವೂದ್‌ ಇಬ್ರಾಹಿಂ ಸಹೋದರಿ ಹಸೀನಾಳ ಮುಂಬೈ ನಿವಾಸದಲ್ಲಿ ಇಡಿ ಶೋಧ

Spread the love

ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೆ ಸಂಬಂಧಿಸಿದ ಮುಂಬೈನ ವಿವಿಧ ತಾಣಗಳಿಗೆ ಇ ಡಿ (ಜಾರಿ ನಿರ್ದೇಶನಾಲಯದ) ಅಧಿಕಾರಿಗಳು ಧಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದಾರೆ.

ಮುಂಬೈನ ಸುಮಾರು 10 ತಾಣಗಳಲ್ಲಿ ಇ.ಡಿ ಶೋಧಾ ಕಾರ್ಯ ನಡೆಸುತ್ತಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಶೋಧ ನಡೆದಿದೆ ಎನ್ನಲಾಗಿದೆ.

ದಾವೂದ್‌ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್‌ ಳ ಸೀಲ್‌ ಮಾಡಿದ ನಿವಾಸವನ್ನೂ ತೆರೆದು ಇ.ಡಿ ಅಧಿಕಾರಿಗಳು ಮನೆಯೊಳಗೆ ಶೋಧ ಕಾರ್ಯ ನಡೆಸಿದ್ದಾರೆ.

ಪ್ರಕರಣದಲ್ಲಿ ನಂಟು ಹೊಂದಿರುವ ರಾಜಕಾರಣಿಯೊಬ್ಬರ ಮನೆಯಲ್ಲೂ ಶೋಧ ನಡೆಸಿದ್ದಾರೆ.

ಭಾರತಕ್ಕೆ ಬೇಕಾಗಿರುವ ಮೋಸ್ಟ್‌ ವಾಂಟೆಡ್‌ ಅಪರಾಧಿಗಳ ಪಟ್ಟಿಯಲ್ಲಿ ದಾವೂದ್‌ ಇಬ್ರಾಹಿಂ ಹೆಸರಿದೆ. ಈತ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆ ಇದೆ.

error: Content is protected !!