December 23, 2024

Newsnap Kannada

The World at your finger tips!

school 1

ರಾಜ್ಯದಲ್ಲಿ ಡಿಸೆಂಬರ್ ನಿಂದ ಶಾಲೆ ಆರಂಭ ? ಇಂದು ಸಿಎಂಗೆ ವರದಿ

Spread the love

ಕೊರೊನಾ ಭೀತಿಯಿಂದ ಶಾಲೆಗಳು ಮುಚ್ಚಿ ಏಳೆಂಟು ತಿಂಗಳೆ ಕಳೆದಿವೆ. ಈಗ ಮತ್ತೆ ಶಾಲೆ ಆರಂಭಿಸಲು ವ್ಯಾಪಕ ವಿರೋಧವಿತ್ತು. ಇದರ ಮಧ್ಯೆ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಲೆ ಆರಂಭಿಸುವ ಬಗ್ಗೆ ಸರ್ಕಾರ ಚಿಂತನೆ ಮಾಡಿದೆ.

ಈ ಸಂಬಂಧ ಖಾಸಗಿ ಶಾಲೆಯವರು, ಎಸ್ ಡಿಎಂಸಿ ಸದಸ್ಯರು, ಪೋಷಕರು ಮತ್ತು ತಜ್ಞರೊಡನೆ ಚರ್ಚೆ ನಡೆಸಿದ್ದ ಶಿಕ್ಷಣ ಇಲಾಖೆ ಈಗ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿದೆ.

1 ರಿಂದ 8 ನೇ ತರಗತಿ ತನಕದ ಪ್ರಾಥಮಿಕ ಶಿಕ್ಷಣ ಹೊರತುಪಡಿಸಿ, 9 ನೇ ತರಗತಿಯಿಂದ 12 ನೇ ತರಗತಿ ತನಕ ಶಾಲೆ ಆರಂಭಿಸಬಹುದು. ಆದರೆ ಇದಕ್ಕೆ ಹಲವು ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಶಾಲೆ ಆರಂಭದಿಂದ ಕೊರೊನಾ ವ್ಯಾಪಕವಾಗಿ ಹರಡಿದರೆ ಮತ್ತೆ ಮುಚ್ಚಬೇಕು. ಕೊರೊನಾ ಹರಡದಿದ್ದರೆ ಜನವರಿ ತಿಂಗಳಿನಿಂದ 1 ರಿಂದ 8 ನೇ ತರಗತಿಗಳಿಗೂ ಕೂಡ ಶಾಲೆ ಆರಂಭಿಸುವ ಬಗ್ಗೆ ಶಿಪಾರಸು ಮಾಡಲಾಗಿದೆ.

ಕೊರೊನಾ ಸೋಂಕಿತರ ಸಂಖ್ಯೆ ಈಗ ಶೇಕಡಾ 19 ರಿಂದ 2 ಪರ್ಸೆಂಟ್ ಕೆಳಗೆ ಇಳಿದಿದೆ. ಇದರಿಂದ ಶಾಲೆ ಆರಂಭ ಮಾಡಿದ್ರೆ ಏನೂ ತೊಂದರೆ ಆಗದು ಎಂದು ವರದಿಯಲ್ಲಿ ಶಿಪಾರಸು ಮಾಡಲಾಗಿದೆ. ಈಗಾಗಲೇ ಅರುಣಾಚಲ ಪ್ರದೇಶದಲ್ಲಿ 9 ರಿಂದ 12 ನೇ ತರಗತಿ ತನಕ ನವೆಂಬರ್ 17 ರಿಂದ ಶಾಲೆ ಆರಂಭವಾಗಲಿದೆ. 

ಕೇಂದ್ರೀಯ ವಿದ್ಯಾಲಯ ಕೂಡ ಶಾಲೆ ಆರಂಭಿಸುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಕೂಡ ಶಾಲೆ ಆರಂಭಿಸಬೇಕು ಎಂದು ಕೆಲವು ಪೋಷಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಶಿಕ್ಷಣ ಇಲಾಖೆ ಆಯುಕ್ತರು ನೀಡಿರುವ ಶಿಪಾರಸು ವರದಿಯನ್ನು ಪ್ರಧಾನ ಕಾರ್ಯದರ್ಶಿಗಳು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಇಂದು ಸಲ್ಲಿಸುತ್ತಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಲಿದ್ದು, ಅಂತಿಮವಾಗಿ ಸಿಎಂ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!