ರಾಜ್ಯ ಸರ್ಕಾರ ಇಂದು ಪ್ರಕಟಿಸಿರುವ ಅನ್‌ಲಾಕ್ ಮಾರ್ಗಸೂಚಿಯಲ್ಲಿ ಅಕ್ಟೋಬರ್ 15 ರಿಂದ ಶಾಲಾ ಕಾಲೇಜುಗಳ ಪುನರಾರಂಭಕ್ಕೆ ಒಪ್ಪಿಗೆ ನೀಡಿದೆ. ಸರ್ಕಾರಿ ಶಾಲೆ ಮತ್ತು ಸ್ಥಳೀಯ ಆಡಳಿತದೊಂದಿಗೆ ಸಮಾಲೋಚಿಸಿ ಕೆಲವು ಷರತ್ತುಗಳ ಮೂಲಕ ಹಂತ ಹಂತವಾಗಿ ಶಾಲೆ-ಕಾಲೇಜು ಆರಂಭಿಸುವುದಾಗಿ ಸರ್ಕಾರ ತಿಳಿಸಿದೆ.
ಈ ಮೊದಲು ಅಕ್ಟೋಬರ್ 21ರಿಂದ ಶಾಲಾ-ಕಾಲೇಜುಗಳ ಆರಂಭ ಮಾಡಲು ಸರ್ಕಾರ ನಿರ್ಧರಿಸಿತ್ತು. ಆದರೆ ಕೊರೋನಾ ಹೆಚ್ಚಳವಾದ ಹಿನ್ನೆಲೆಯಲ್ಲಿ ಸರ್ಕಾರ, ಪೋಷಕರ ಹಾಗೂ ತಜ್ಞರ ಸಲಹೆ-ಸಮಾಲೋಚನೆಯೊಂದಿಗೆ ಶಾಲಾ-ಕಾಲೇಜು ಪುನರಾರಂಭದ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದರು.
ಆದರೆ ಈಗ ಅನ್‌ಲಾಕ್ ಮಾರ್ಗಸೂಚಿಯಲ್ಲಿ ಶಾಲಾ-ಕಾಲೇಜುಗಳ ಪುನರಾರಂಭಕ್ಕೆ ಸರ್ಕಾರ ಸಮ್ಮತಿಸಿದೆ. ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿ ತೆಗೆದುಕೊಳ್ಳಲು ಇಷ್ಟಪಟ್ಟರೂ ಸರ್ಕಾರ ಅದಕ್ಕೆ ಅನುಮತಿ ನೀಡುತ್ತದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ತರಗತಿಗೆ ಹಾಜರಾಗಬೇಕೆಂಬ ನಿಯಮವಿಲ್ಲ. ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವಲ್ಲಿ ಪೋಷಕರ ನಿರ್ಧಾರವೇ ಅಂತಿಮ. ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳು ಖಡ್ಡಾಯವಾಗಿ ಆರೋಗ್ಯ ಮತ್ತು ಸುರಕ್ಷಾ ದೃಷ್ಠಿಕೋನ ಅನುಸರಿಸಬೇಕೆಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.
More Stories
SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
ತುಪ್ಪ ಎಂಬ ಮಹಾ ಔಷಧಿ