February 20, 2026

Newsnap Kannada

The World at your finger tips!

schooling , Learning , teaching

Just for fun, I threatened with a bomb call - statement of a minor boy ಜಸ್ಟ್ ಫಾರ್ ಫನ್‍ ಗೆ ಬಾಂಬ್ ಬೆದರಿಕೆ ಹಾಕಿದ್ದೆ – ಅಪ್ರಾಪ್ತ ಬಾಲಕ ಹೇಳಿಕೆ

ರಾಜ್ಯದಲ್ಲಿ ಶಾಲೆ ಆರಂಭ: ನಾಳೆ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

Spread the love

ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸುವ ಕುರಿತು ರಾಜ್ಯ ಸರ್ಕಾರ ಸೋಮವಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಮತ್ತು ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

‘ಶಾಲೆಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸಿದ್ಧಪಡಿಸಿದ ವರದಿಯನ್ನು ಸಚಿವರು, ಮುಖ್ಯಮಂತ್ರಿಯವರ ಮುಂದಿಡುವರು. ಪೋಷಕರು, ವಿದ್ಯಾರ್ಥಿಗಳು, ಶಾಲಾ ಆಡಳಿತ ಮಂಡಳಿಗಳು, ಶಿಕ್ಷಕರು ನೀಡಿದ ಅಭಿಪ್ರಾಯಗಳು ಈ ವರದಿಯಲ್ಲಿವೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಇಲಾಖೆಯ ಆಯುಕ್ತ ಅನ್ಬುಕುಮಾರ್‌, ಡಿಸೆಂಬರ್‌ ಎರಡನೇ ವಾರದಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಾಲಾ–ಕಾಲೇಜು ಪ್ರಾರಂಭಿಸಬಹುದು ಎಂದು ನ.9ರಂದು ಶಿಫಾರಸು ಮಾಡಿದ್ದರು.

error: Content is protected !!