December 28, 2024

Newsnap Kannada

The World at your finger tips!

school , learning , teaching

ನಾಳೆಯಿಂದ 9 ರಿಂದ 12 ನೇ ತರಗತಿಯವರೆಗೆ ಶಾಲಾ – ಕಾಲೇಜು ಆರಂಭ

Spread the love

ರಾಜ್ಯದಲ್ಲಿ ಐದು ಜಿಲ್ಲೆಗಳನ್ನು ಹೊರತುಪಡಿಸಿ ನಾಳೆಯಿಂದ (ಆಗಸ್ಟ್ 23) 9 ರಿಂದ 12 ನೇ ತರಗತಿಗಳಲ್ಲಿ ಭೌತಿಕ ಪಾಠ ಪ್ರಾರಂಭವಾಗಲಿದೆ.

ಪಾಸಿಟಿವಿಟಿ ದರ ಶೇಕಡ 2 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ 9 ಮತ್ತು 10 ನೇ ತರಗತಿ ಹಾಗೂ ಪ್ರಥಮ, ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ.

ಶಾಲಾ-ಕಾಲೇಜುಗಳಲ್ಲಿ ಅಗತ್ಯ ಸಿದ್ಧತೆ ಏನು ? ಹೇಗೆ ? :

  • 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೆಳಗಿನ ವೇಳೆ ಅರ್ಧ ದಿನ ಮಾತ್ರ ಭೌತಿಕ ತರಗತಿ ನಡೆಯಲಿವೆ.
  • ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ
  • ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.50 ರವರೆಗೆ ತರಗತಿಗಳು ನಡೆಯಲಿವೆ.
  • ವಿದ್ಯಾರ್ಥಿಗಳು ಮತ್ತು ಕೊಠಡಿಯ ಲಭ್ಯತೆ ನೋಡಿಕೊಂಡು 15 ರಿಂದ 20 ಜನರ ತಂಡ ಮಾಡಿ ಭೌತಿಕ ತರಗತಿ ನಡೆಸಲಾಗುವುದು. ‌
  • ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ದಿನ ಆಫ್ ಲೈನ್ ಕ್ಲಾಸ್ ಗಳು ಮತ್ತು ಮೂರು ದಿನ ಆನ್ ಲೈನ್ ಕ್ಲಾಸ್ ಗಳು ನಡೆಯಲಿವೆ.
  • ಶೇ 50 ರಷ್ಟು ವಿದ್ಯಾರ್ಥಿಗಳು ಸೋಮವಾರ, ಮಂಗಳವಾರ, ಬುಧವಾರ ತರಗತಿಗೆ ಹಾಜರಾಗಬೇಕಿದೆ.
  • ಉಳಿದ ವಿದ್ಯಾರ್ಥಿಗಳು ಗುರುವಾರ, ಶುಕ್ರವಾರ, ಶನಿವಾರ ಕಾಲೇಜಿಗೆ ಬರಬೇಕಿದ್ದು, ಉಳಿದ ಮೂರು ದಿನ ಆನ್ ಲೈನ್ ತರಗತಿ ನಡೆಯಲಿವೆ
  • ಪಾಸಿಟಿವಿಟಿ ದರ ಶೇಕಡ 2 ಕ್ಕಿಂತ ಹೆಚ್ಚಾಗಿರುವ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಸದ್ಯಕ್ಕೆ ಶಾಲೆ ಆರಂಭ ಇಲ್ಲ.
Copyright © All rights reserved Newsnap | Newsever by AF themes.
error: Content is protected !!