ಉಚ್ಚಾಟಿತ AIADMK ನಾಯಕಿ ಶಶಿಕಲಾ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಇಂದು ಭೇಟಿ ಮಾಡಿದರು.
ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ರಜನಿಕಾಂತ್ ಮನೆಗೆ ಶಶಿಕಲಾ ಭೇಟಿ ನೀಡಿ ರಜನಿ ಆರೋಗ್ಯ ವಿಚಾರಿಸಿದರು.
ಸದ್ಯ ಶಶಿಕಲಾ ಮತ್ತೆ ತಮಿಳುನಾಡು ರಾಜಕೀಯ ಕ್ಷೇತ್ರದ ಮರುಪ್ರವೇಶಕ್ಕೆ ಚಿಂತನೆ ನಡೆಸಿದ್ದಾರೆ ಈ ಸಂದರ್ಭದಲ್ಲಿ ಶಶಿಕಲಾ, ರಜನಿ ಕಾಂತ್ ಅವರನ್ನು ಭೇಟಿಯಾಗಿದ್ದು ತಮಿಳುನಾಡು ರಾಜಕೀಯದಲ್ಲಿ ಭಾರೀ ಕುತೂಹಲನ್ನು ಮೂಡಿಸಿದೆ.
ಈ ನಡುವೆ ರಜನಿಕಾಂತ್ ಅವರಿಗೆ ದಾದಾ ಸಾಬ್ ಪಾಲ್ಕೆ ಪ್ರಶಸ್ತಿ ಬಂದ ಹಿನ್ನಲೆಯಲ್ಲಿ ಶಶಿಕಲಾ ರಜನಿಕಾಂತ್ ಅವರನ್ನು ಭೇಟಿ ಮಾಡಿ ಶುಭ ಕೋರಿದ್ದಾರೆ.
ಇದೇ ವೇಳೆ ರಜನಿ ಅವರ ಆರೋಗ್ಯದ ಬಗ್ಗೆ ಯೋಗಕ್ಷೇಮ ವಿಚಾರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಅಕ್ಟೋಬರ್‌ನಲ್ಲಿ ರಜನಿ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಶಶಿಕಲಾ ರಜನಿ ಅವರ ಆರೋಗ್ಯವನ್ನು ವಿಚಾರಿಸಿ ಅವರಿಗೆ ಹೂ ಗುಚ್ಚವನ್ನು ನೀಡಿದ್ದಾರೆ. ಬೇರೆ ಯಾವುದೇ ವಿಷಯ ಚಚೆ೯ಯಾಗಿಲ್ಲ ಎಂದು ಮೂಲಗಳು ಹೇಳಿವೆ.
- ರಾಜ್ಯದ ಈ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ
- ಪಾಸ್ಪೋರ್ಟ್ ಸೇವೆ ವಿಸ್ತರಣೆ: ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ
- ಹಣ ಡಬ್ಲಿಂಗ್ ಹೆಸರಲ್ಲಿ 2 ಕೋಟಿ ರೂಪಾಯಿ ವಂಚನೆ: 7 ಮಂದಿ ಬಂಧನ
- ಹಸುಗಳ ಕೆಚ್ಚಲು ಕೊಯ್ದಆರೋಪಿ ಬಂಧನ : ಜ.24 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ
- ದುಬೈ ಕಾರ್ ರೇಸ್ನಲ್ಲಿ ನಟ ಅಜಿತ್ ಕುಮಾರ್ ಭರ್ಜರಿ ಸಾಧನೆ
More Stories
ರಾಜ್ಯದ ಈ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ
ಪಾಸ್ಪೋರ್ಟ್ ಸೇವೆ ವಿಸ್ತರಣೆ: ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ
ಹಣ ಡಬ್ಲಿಂಗ್ ಹೆಸರಲ್ಲಿ 2 ಕೋಟಿ ರೂಪಾಯಿ ವಂಚನೆ: 7 ಮಂದಿ ಬಂಧನ