January 29, 2026

Newsnap Kannada

The World at your finger tips!

shashikal

ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಿದ ಶಶಿಕಲಾ : ತಮಿಳುನಾಡು ರಾಜಕಾರಣಕ್ಕೆ ಬಿಗ್ ಟ್ವಿಸ್ಟ್ !

Spread the love

ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ರಾಜಕೀಯದಿಂದ ನಿವೃತ್ತಿ ಹೊಂದುತ್ತಿರುವುದಾಗಿ ಘೋಷಿಸಿ, ತಮಿಳುನಾಡಿನ ರಾಜಕಾರಣಕ್ಕೆ ಬಿಗ್ ಟ್ವಿಸ್ಟ್ ನೀಡಿದ್ದಾರೆ.

ಎಐಎಡಿಎಂಕೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷವನ್ನ ಸೋಲಿಸುವಂತೆ ಆಗ್ರಹಿಸಿದ್ದಾರೆ. ನಾನು ಅಮ್ಮನ(ಜಯಲಲಿತಾ) ಸುವರ್ಣ ಆಡಳಿತಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ನಾನು ಎಂದೂ ಸಹ ಯಾವುದೇ ಅಧಿಕಾರ ಹಿಂದೆ ಬಿದ್ದಿಲ್ಲ.. ಜಯಲಲಿತಾ ಬದುಕಿದ್ದಾಗಲೂ ನಾನು ಅಧಿಕಾರಕ್ಕೆ ಆಸೆ ಪಟ್ಟಿಲ್ಲ. ಅವರು ನಿಧನರಾದ ಮೇಲೂ ಸಹ ನಾನು ಅಧಿಕಾರಕ್ಕಾಗಿ ಆಸೆಪಡುವುದಿಲ್ಲ. ನಾನು ರಾಜಕೀಯ ತೊರೆಯುತ್ತಿದ್ದೇನೆ ಹಾಗೂ ನಮ್ಮ ಪಕ್ಷ ಗೆದ್ದು ಜಯಲಲಿತಾರ ಪರಂಪರೆಯನ್ನು ಮುಂದುವರೆಸಲಿ ಎಂದು ಇದೇ ವೇಳೆ ತಮ್ಮ ಪ್ರಕಟಣೆಯಲ್ಲಿ ಎಐಎಡಿಎಂಕೆಗೆ ಹಾರೈಸಿದ್ದಾರೆ.

error: Content is protected !!