ರಾಮನಗರ : ಚುನಾವಣಾಧಿಕಾರಿಗಳು , ಕಾಂಗ್ರೆಸ್ (Congress) ಶಾಸಕರು ಸೀರೆ ಸಂಗ್ರಹಿಸಿರುವ ಆರೋಪ ಹಿನ್ನೆಲೆಯಲ್ಲಿ ಗೋಡೌನ್‌ನಲ್ಲಿದ್ದ ಸೀರೆಗಳನ್ನು ಜಪ್ತಿ ಮಾಡಿದ್ದಾರೆ.
ನಗರದ ದ್ಯಾವರಸೇಗೌಡನ ದೊಡ್ಡಿ ರಸ್ತೆಯಲ್ಲಿರುವ ಖಾಸಗಿ ಗೋದಾಮು ಬಳಿ ಸೀರೆಗಳು ತುಂಬಿದ್ದ ವಾಹನವನ್ನು ಬಿಜೆಪಿ (BJP) ಮತ್ತು ಜೆಡಿಎಸ್ (JDS) ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
4 ಲಕ್ಷ ರೂ. ಮೌಲ್ಯದ 10 ಸಾವಿರಕ್ಕೂ ಅಧಿಕ ಸೀರೆಗಳನ್ನ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದು , ಮತದಾರರಿಗೆ ಹಂಚುವುದಕ್ಕಾಗಿ ಕಾಂಗ್ರೆಸ್‌ನವರು ವಾಹನದಲ್ಲಿ ಸೀರೆಗಳನ್ನು ತಂದು ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಆಪ್ತನೊಬ್ಬ ಸೀರೆ ಹಂಚುವ ಕೆಲಸ ಮಾಡಿದ್ದು ,ಎರಡು ವಾಹನಗಳಲ್ಲಿ ಸೀರೆ ಹಂಚಲಾಗಿದೆ.ನಾನು ಪಕ್ಷಕ್ಕಾಗಲಿ, ಅಭ್ಯರ್ಥಿಗಾಗಲಿ ದ್ರೋಹ ಮಾಡುವುದಿಲ್ಲ : ಪ್ರತಾಪ್ ಸಿಂಹ
ಡಿವೈಎಸ್ಪಿ ದಿನಕರ ಶೆಟ್ಟಿ, ರಾಮನಗರಪುರ ಠಾಣೆ ಪಿಎಸ್ ಐ ಆಕಾಶ್ ಸೇರಿದಂತೆ ಸ್ಥಳೀಯ ಚುನಾವಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ,ಸೀರೆಗಳನ್ನು ಪರಿಶೀಲಿಸಿ ಗೋದಾಮು ಸಿಬ್ಬಂದಿಯಿಂದ ಸೀರೆಗಳನ್ನು ತಂದಿರುವುದಕ್ಕೆ ಸಂಬಂಧಿಸಿದ ರಸೀದಿ ಸೇರಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ