ತಮ್ಮನ್ನು ಕಾನೂನು ಬಾಹಿರ ವರ್ಗಾವಣೆ ಮಾಡಲಾಗಿದೆ ಎಂದು ಪ್ರಶ್ನಿಸಿ ಸಿಎಟಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮತ್ತೆ ಅಕ್ಟೋಬರ್ 23ಕ್ಕೆ ಮುಂದೆ ಹೋಗಿದೆ.
ರಾಜ್ಯ ಸರ್ಕಾರವು ಬಿ. ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಿಸಿದ ಒಂದೇ ತಿಂಗಳಲ್ಲೇ ಅವರನ್ನು ಬದಲಾಯಿಸಿ, ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿತ್ತು.
ಸರ್ಕಾರದ ಈ ಕ್ರಮವನ್ನು ಖಂಡಿಸಿ ಶರತ್ ಸಿಎಟಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಇಂದು ಸಿಎಟಿ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡಿದ ಶರತ್ ಪರ ವಕೀಲ ಎ.ಎಸ್. ಪೊನ್ನಣ್ಣ, ‘ಸರ್ಕಾರವು ಇವರನ್ನು ಅವಧಿಗೆ ಮುನ್ನವೇ ನಿಯಮ ಬಾಹಿರವಾಗಿ ವರ್ಗ ಮಾಡಿದೆ. ಎರಡು ವರ್ಷಗಳ ಕಡ್ಡಾಯ ಸೇವೆಯ ನಿಯಮವನ್ನು ಸರ್ಕಾರ ಪಾಲನೆ ಮಾಡಿಲ್ಲ ಹಾಗೂ ಶರತ್ ಅವರನ್ನು ವರ್ಗ ಮಾಡುವ ಮುನ್ನ ಯಾವುದೇ ಸಲಹಾ ಸಮಿತಿಯ ಅಭಿಪ್ರಾಯ ಪಡೆದಿಲ್ಲ. ಹಾಗಾಗಿ ಇವರ ವರ್ಗಾವಣೆ ದೋಷಪೂರಿತವಾದುದು’ ಎಂದು ವಾದಿಸಿದರು.
ತರುವಾಯ ರೋಹಿಣಿ ಸಿಂಧೂರಿ ಪರ ವಕೀಲರು ವಾದ ಮಂಡನೆ ಮಾಡಲು ಕಾಲಾವಕಾಶ ನೀಡಿದರು. ಹಾಗಾಗಿ ಸಿಎಟಿ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ಮುಂದೂಡಿತು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ