ಡ್ರಗ್ಸ್ ಪ್ರಕರಣದ ತನಿಖೆಯಲ್ಲಿ ಬಂಧಿತಳಾಗಿರುವ ನಟಿ ಸಂಜನಾ ಗಲ್ರಾನಿ ಹಲವು ಕೋಟಿಗಳ ಬಡ್ಡಿ ವ್ಯವಹಾರ ಮಾಡುತ್ತಿದ್ದಾಳೆ. ಬಡ್ಡಿ ಹೈದ್ಲು ಕಣ್ಲಾ ಎಂಬ ಸಂಗತಿ ಇಡಿ (ಜಾರಿ ನಿರ್ದೇಶನಾಲಯ) ಆಕೆಯ ಬಂಡವಾಳ ಬಯಲು ಮಾಡಿದೆ
ನಟಿ ಸಂಜನಾ ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾದ ನಂತರ ಆಕೆ ಮಾಡುತ್ತಿದ್ದ ಹವಾಲಾ ಹಗರಣ, ಬಿಟ್ ಕಾಯಿನ್ ದಂಧೆ ಮುಂತಾದ ಅವ್ಯವಹಾರಗಳು ಒಂದೊಂದಾಗಿ ಹೊರಬರತೊಡಗಿವೆ.
ಈಗ ಇಡಿ ತನಿಖೆಯ ವೇಳೆ ಮತ್ತೊಂದು ಹಗರಣ ಹೊರ ಬಿದ್ದಿದೆ. ಅದುವೇ ಮೀಟರ್ ಬಡ್ಡಿ ದಂಧೆ. ಇಡಿ ವಾರೆಂಟ್ ಸಮೇತ ಸಂಜನಾ ಅವರ ಮನೆಯನ್ನು ಪರಿಶೀಲಿಸಿದಾಗ ಅವರ ಹೆಸರಲ್ಲಿ ಒಟ್ಟು 11 ಬ್ಯಾಂಕ್ ಖಾತೆಗಳಿರುವುದು ತಿಳಿದು ಬಂದಿದೆ. ಒಂದೊಂದು ಖಾತೆಯಲ್ಲೂ ಹಲವಾರು ಕೋಟಿಗಳಷ್ಟು ವ್ಯವಹಾರ ನಡೆದಿದೆ. ಅದರಲ್ಲೂ ಒಂದು ಖಾತೆಯಿಂದ ಮತ್ತೊಬ್ಬರ ಖಾತೆಗೆ ಬೃಹತ್ ಮೊತ್ತದ ಹಣ ವರ್ಗಾವಣೆಯಾಗಿದೆ. ಈ ಹಣದ ಬಾಬತ್ತು ಇಡಿ ಅಧಿಕಾರಿಗಳನ್ನೇ ದಂಗುಬಡಿಸಿದೆ.
ತನಿಖೆಯಲ್ಲಿ ತಿಳಿದದ್ದೇನು?
ತನಿಖೆಯ ವೇಳೆ ತಿಳಿದು ಬಂದದ್ದೇನೆಂದರೆ, ನಟಿ ಸಂಜನಾ ಹಲವಾರು ಪಾರ್ಟಿಗಳಿಗೆ ಹೋಗುತ್ತಿದ್ದರು. ಆ ಪಾರ್ಟಿಗಳಲ್ಲಿ ಡ್ರಗ್ಸ್ ಸಮಾರಾಧನೆಯೂ ಸಹ ನಡೆಯುತ್ತಿತ್ತು. ಅನೇಕ ಮಾಲ್‌ಗಳ ಮಾಲೀಕರೂ ಅಂತಹ ಪಾರ್ಟಿಗಳಿಗೆ ಬರುತ್ತಿದ್ದರು. ಡ್ರಗ್ಸ್ ಕೊಳ್ಳಲು ಸಂಜನಾ ಮಾಲ್‌ಗಳ ಮಾಲೀಕರಿಗೆ ಮೀಟರ್ ಬಡ್ಡಿ ಲೆಕ್ಕದಲ್ಲಿ ಅವರಿಗೆ ದುಡ್ಡನ್ನು ಸಾಲವಾಗಿ ನೀಡುತ್ತಿದ್ದರು. ಸಾಲ ನೀಡುವಾಗ ಸಂಜನಾ ಬ್ಲ್ಯಾಂಕ್ ಚೆಕ್‌ಗಳನ್ನು ಸ್ವೀಕರಿಸಿ ಸಾಲಗಾರರಿಗೆ ಸಾಲ ನೀಡುತ್ತಿದ್ದರು. ಸಾಲ ಸಕಾಲದಲ್ಲಿ ವಾಪಸಾತಿ ಆಗಲಿಲ್ಲವೆಂದರೆ, ಅದಕ್ಕೆ ತಮ್ಮದೇ ‘ಹುಡುಗರ ಪಡೆ’ಯನ್ನು ನೇಮಿಸಿಕೊಂಡಿದ್ದರು. ಈ ಪಡೆ ಸಾಲಗಾರರು ಸಮಯಕ್ಕೆ ಸರಿಯಾಗಿ ಹಣ ವಾಪಸ್ ನೀಡಲಿಲ್ಲವೆಂದರೆ, ತಮ್ಮ ಬಳಿಯಿದ್ದ ಡುಪ್ಲಿಕೇಟ್ ಕೀ ಬಳಸಿ ಅವರ ಅತ್ಯಾಧುನಿಕ, ಐಷಾರಾಮಿ Gmಕಾರುಗಳನ್ನು ಸೀಜ್ ಮಾಡಿಕೊಂಡು ಬರುತ್ತಿತ್ತು.
ಇಷ್ಟೆಲ್ಲ ವಿವರಗಳು ಇಡಿ ತನಿಖೆಯಲ್ಲಿ ಹೊರಬಿದ್ದಿದೆ. ಖುದ್ದಾಗಿ ಸಂಜನಾ ಅವರೇ ಈ ವಿಷಯಗಳನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಳಿಸಿದ ದುಡ್ಡನ್ನು ಏನು ಮಾಡಿದರು?
ಹಗರಣಗಳಿಂದ ಗಳಿಸಿದ ದುಡ್ಡನ್ನು ಸಂಜನಾ ಮನ್ಸೂರ್ ಖಾನ್ ‘ಐಎಮ್‌ಎ (ಐ ಮಾನಿಟರಿ ಅಡ್ವೈಸರಿ)’ ನಲ್ಲಿ ಹಣ ದುಪ್ಪಟ್ಟಾಗಲೆಂದು ಹೂಡಿಕೆ ಮಾಡಿದ್ದರು. ಆದರೆ ಮನ್ಸೂರ್ ಖಾನ್ ತನ್ನ ಹಣಕ್ಕೂ ಪಂಗನಾಮ ಹಾಕಿದ್ದಾನೆ ಎಂದು ಸಂಜನಾ ಹೇಳಿದ್ದಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ