January 9, 2025

Newsnap Kannada

The World at your finger tips!

pvs

ಸ್ಯಾಂಡಲ್​ವುಡ್​ಗೆ 17ರ ಕಂಟಕ; ಅಪ್ಪು ಸೇರಿ ಮೂವರು ನಟರು ಇಹಲೋಕ ತ್ಯಜಿಸಿದ್ದೇಕೆ ?

Spread the love

ಪುನೀತ್ ರಾಜ್​ಕುಮಾರ್​ ನಿಧನದ ನಂತರ ಅವರು ಹುಟ್ಟಿದ 17 ರ ಸಂಖ್ಯೆ ಭಾರೀ ಚರ್ಚೆಗೆ ಕಾರಣವಾಗಿದೆ. ಪುನೀತ್ 17ನೇ ತಾರೀಖಿನಂದು ಹುಟ್ಟಿದ ಬಹುದೊಡ್ಡ ಮೂವರು ನಟರನ್ನು ಅಲ್ಪಾವಧಿಗೆ ಸ್ಯಾಂಡಲ್​ವುಡ್ ಕಳೆದುಕೊಂಡಿದೆ.

ಕಳೆದ ಒಂದೂವರೆ ವರ್ಷಗಳ ಅಂತರದಲ್ಲಿ ಸ್ಯಾಂಡಲ್​​ವುಡ್​​ ಮೂವರು ಪ್ರತಿಭಾವಂತ ನಟರನ್ನು ಕಳೆದುಕೊಂಡಿದೆ.
ಈ ಲೋಕ ಬಿಟ್ಟು ಹೋದ ಮೂವರು ನಟರು 17ನೇ ತಾರೀಖಿನಂದು ಹುಟ್ಟಿದ ಪ್ರತಿಭಾನ್ವಿತ ಕಲಾವಿದರಾಗಿದ್ದಾರೆ. ಒಂದು ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್ ಹಾಗೂ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್.

ಚಿರಂಜೀವಿ ಸರ್ಜಾ:
ಅಕ್ಟೋಬರ್ 17, 1984ರಲ್ಲಿ ಚಿರಂಜೀವಿ ಸರ್ಜಾ ಜನಿಸಿದ್ದರು. ನಂತರದ ದಿನಗಳಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದರು. ಆದರೆ ವಿಧಿಲಿಖಿತ ಬೇರಯದ್ದೇ ಆಗಿತ್ತು. 2020 ಜೂನ್ 7 ರಂದು ಹಠಾತ್ ಹೃದಯಘಾತದಿಂದ ನಿಧನರಾದರು

ಸಂಚಾರಿ ವಿಜಯ್:

ಸಕಲ ಕಲಾ ವಲ್ಲಭ ಸಂಚಾರಿ ವಿಜಯ್, ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಎಂದೇ ಕರೆಯಲಾಗುತ್ತಿತ್ತು. ಜುಲೈ 17, 1983 ರಲ್ಲಿ ಜನಿಸಿದ್ದ ಇವರೂ ಕೂಡ ನಮ್ಮನ್ನು ಅಗಲಿದ್ದಾರೆ. 2021, ಜೂನ್ 15 ರಂದು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ನಮ್ಮನ್ನ ಬಿಟ್ಟು ಹೋಗಿದ್ದಾರೆ.

ಪುನೀತ್ ರಾಜ್​ಕುಮಾರ್​:
ಈಗ ಪುನೀತ್​ ರಾಜ್​ಕುಮಾರ್ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪುನೀತ್ ರಾಜ್​ಕುಮಾರ್ ಮಾರ್ಚ್​​ 17, 1975ರಲ್ಲಿ ಜನಿಸಿದ್ದರು. ಕಾಕತಾಳಿಯ ಎಂಬುವಂತೆ, 17ನೇ ತಾರೀಖಿನಂದೇ ಜನಿಸಿ, ಸ್ಟಾರ್​​ಗಿರಿ ಪಡೆದುಕೊಂಡು ಅತೀ ಕಡಿಮೆ ವಯಸ್ಸಿನಲ್ಲಿಯೇ ಸಮಾಜಕ್ಕೆ, ಕನ್ನಡ ಸಿನಿಮಾ ಇಂಡಸ್ಟ್ರಿಗೆ ಅಪಾರವಾದ ಕೊಡುಗೆಗಳನ್ನು ನೀಡಿ ಬಹು ದೂರ ನಡೆದುಬಿಟ್ಟಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!