January 29, 2026

Newsnap Kannada

The World at your finger tips!

drugs , ganja , smuggling

ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ: ಕಿಂಗ್‌ಪಿನ್‌ ವಿಟಿ ಬಂಧನ

Spread the love

ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೋಲೀಸರು ನೈಜೀರಿಯ ಮೂಲದ ವಿಟಿ ಎಂಬ ಡ್ರಗ್ ಪೆಡ್ಲರ್‌ನನ್ನು ಬಂಧಿಸಿದ್ದಾರೆ.

ಈ ಮೂಲಕ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಇನ್ನೂ ಅನೇಕ ಸ್ಯಾಂಡಲ್‌ವುಡ್ ನಟ – ನಟಿಯರ ಹೆಸರುಗಳು ವಿಟಿ ಮೂಲಕ ಬಹಿರಂಗಗೊಳ್ಳಲಿವೆ ಎಂದು ಹೇಳಲಾಗುತ್ತಿದೆ.

ನೈಜೀರಿಯಾ ಮೂಲದ ವಿಟಿ 7 ವರ್ಷಗಳಿಂದ ಡ್ರಗ್ಸ್ ದಂಧೆ ಮಾಡುತ್ತಿದ್ದ ವಿಟಿ, 42 ಜನ ಡ್ರಗ್ ಪೆಡ್ಲರ್‌ಗಳ ದೂಡ್ಡ ಜಾಲವನ್ನು ಸೃಷ್ಠಿ ಮಾಡಿದ್ದ. ರಾಜಕಾರಣಿಗಳು, ಸಿನಿಮಾ ರಂಗದವರು, ಕಾಲೇಜು ವಿದ್ಯಾರ್ಥಿಗಳೇ ಈತನ ಟಾರ್ಗೆಟ್ ಆಗಿದ್ದರು.

ಲಾಕ್‍ಡೌನ್ ವೇಳೆ ಈತನಿಗೆ ಡ್ರಗ್ಸ್ ಪೂರೈಕೆ ಮಾಡುವಂತೆ ಬಹಳ ಬೇಡಿಕೆ ಬಂದಿತ್ತು. ಮನೆಯಲ್ಲಿ ತೂಕದ ಯಂತ್ರವನ್ನು ಈತ್ ಇಟ್ಟುಕೊಂಡು ಆ ಮೂಲಕ ಡ್ರಗ್ಸ್‌ನ್ನು ತೂಕ ಮಾಡುತ್ತಿದ್ದ. ಅಲ್ಲದೇ ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಲೂಮ್ ಪೆಪ್ಪರ್, ಪ್ರತೀಕ್ ಶೆಟ್ಟಿ ಜೊತೆ ವಿಟಿ ಸಂಪರ್ಕ ಹೊಂದಿದ್ದ.

ವಿಟಿ ಹಲವು ವರ್ಷಗಳಿಂದ ಡ್ರಗ್ಸ್ ದಂಧೆ ನಡೆಸುತ್ತಿದ್ದು, ಪೋಲೀಸರು ಅನೇಕ ದಿನಗಳಿಂದ ಈತನ ಬೆನ್ನು ಬಿದ್ದಿದ್ದರು. ಆದರೆ ಈತ ಇಷ್ಟು ದಿನಗಳ ಕಾಲ ತಲೆ ಮರೆಸಿಕೊಂಡಿದ್ದ. ಎಂಜಿನೀಯರಿಂಗ್ ಕಾಲೇಜುಗಳನ್ನೇ ಈತ ತನ್ನ ಅಡ್ಡ ಮಾಡಿಕೊಂಡಿದ್ದ. ಇಂದು ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೋಲೀಸರು ಈತನನ್ನು ಬಂಧಿಸಿದ್ದಾರೆ.

error: Content is protected !!