ಬೆಂಗಳೂರು, ಮಾರ್ಚ್ 04: ಕರ್ನಾಟಕದಲ್ಲಿ ಮೆಟ್ರೋ ಹಾಗೂ ಸರ್ಕಾರಿ ಬಸ್‌ಗಳ ಪ್ರಯಾಣ ದರ ಏರಿಕೆಯಿಂದ ಜನರು ಸಂಕಷ್ಟ ಅನುಭವಿಸುತ್ತಿರುವ ಹೊತ್ತಿನಲ್ಲಿ, ಸರ್ಕಾರ ಶಾಸಕರ ವೇತನ ಹೆಚ್ಚಿಸಲು ನಿರ್ಧರಿಸಿದೆ. ಗೃಹ ಲಕ್ಷ್ಮಿ ಯೋಜನೆಯ ಹಣ ಇನ್ನೂ ಖಾತೆಗೆ ಜಮೆಯಾಗದ ಕಾರಣ ಜನರು ಅಕ್ರೋಶಗೊಂಡಿರುವ ಸಂದರ್ಭದಲ್ಲಿ, ಶಾಸಕರ ಸಂಬಳ ಹೆಚ್ಚಿಸಲು ಚರ್ಚೆ ನಡೆದಿದೆ.
ಸರ್ಕಾರದ ಒಪ್ಪಿಗೆ ದೊರೆತರೆ, ಶಾಸಕರ ಮಾಸಿಕ ವೇತನ (ಭತ್ಯೆ ಹೊರತುಪಡಿಸಿ) 80,000 ರೂ. ಆಗಲಿದೆ.
ಬಜೆಟ್ ಅಧಿವೇಶನ ಮತ್ತು ವೇತನ ಹೆಚ್ಚಳದ ಚರ್ಚೆ
ಸೋಮವಾರ ಆರಂಭವಾದ ಬಜೆಟ್ ಅಧಿವೇಶನದಲ್ಲಿ, ಸ್ಪೀಕರ್ ಯು.ಟಿ. ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ, ಶಾಸಕರ ವೇತನ ಹೆಚ್ಚಳ ಕುರಿತ ಮಸೂದೆ ಮಂಡನೆ ಬಗ್ಗೆ ಚರ್ಚೆ ನಡೆಯಿತು. ಈ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮತ್ತು ವಿರೋಧ ಪಕ್ಷದ ನಾಯಕರು ಹಾಜರಿದ್ದರು.
ಕಳೆದ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ವೇತನ ಹೆಚ್ಚಳ ಪ್ರಸ್ತಾಪಿಸಿದ್ದರಿಂದ, ಈ ಬಾರಿ ಅದನ್ನು ಅನುಷ್ಠಾನಗೊಳಿಸಲು ಚಿಂತನೆ ನಡೆದಿದೆ. ಮಾರ್ಚ್ 21ರ ವರೆಗೆ ನಡೆಯುವ ಬಜೆಟ್ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ನಿರೀಕ್ಷೆಯಿದೆ.
ಪ್ರಸ್ತುತ ಶಾಸಕರ ಸಂಬಳ ಮತ್ತು ಭತ್ಯೆಗಳು
- ಪ್ರತಿ ತಿಂಗಳ ವೇತನ – 40,000 ರೂ.
- ಕ್ಷೇತ್ರ ಭತ್ಯೆ – 60,000 ರೂ.
- ಪ್ರಯಾಣ ಭತ್ಯೆ – 60,000 ರೂ.
- ಆಪ್ತ ಸಹಾಯಕರ ವೇತನ – 20,000 ರೂ.
- ದೂರವಾಣಿ ವೆಚ್ಚ – 20,000 ರೂ.
- ಅಂಚೆ ವೆಚ್ಚ – 5,000 ರೂ.
- ಒಟ್ಟು ಮೊತ್ತ – 2,05,000 ರೂ.
- ಮುಖ್ಯಮಂತ್ರಿಗಳು ಮತ್ತು ಇತರರ ಸಂಬಳ
- ಮುಖ್ಯಮಂತ್ರಿ – 75,000 ರೂ.
- ವಿರೋಧ ಪಕ್ಷದ ನಾಯಕರು – 60,000 ರೂ.
- ಸಂಪುಟ ದರ್ಜೆ ಸಚಿವರು – 60,000 ರೂ.
- ರಾಜ್ಯ ಸಚಿವರು – 50,000 ರೂ.
- ವಿಧಾನಸಭೆ ಸ್ಪೀಕರ್ ಮತ್ತು ಪರಿಷತ್ ಸಭಾಪತಿ – 75,000 ರೂ.
- ವಿಪಕ್ಷದ ಮುಖ್ಯ ಸಚೇತಕರು – 50,000 ರೂ.
- ವಿಧಾನ ಪರಿಷತ್ ಸದಸ್ಯರು – 40,000 ರೂ.
ಇದನ್ನು ಓದಿ –FASTag ದೋಷದಿಂದ ಹಣ ಕಡಿತವಾದರೆ ಮರುಪಾವತಿ ಪಡೆಯುವುದು ಹೇಗೆ?
ಮುನ್ಸೂಚನೆಯ ಪ್ರಕಾರ, ಪ್ರಸ್ತಾವಿತ ಮಸೂದೆಗೆ ಒಪ್ಪಿಗೆ ದೊರೆತರೆ ಶಾಸಕರ ವೇತನ 80,000 ರೂ. ಆಗಲಿದ್ದು, ಭತ್ಯೆಗಳಲ್ಲಿಯೂ ಹೆಚ್ಚಳದ ನಿರೀಕ್ಷೆಯಿದೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು