ಉಡುಪಿ ಜಿಲ್ಲೆಯ ಬ್ರಹ್ಮಾವರದ ಮಂದಾರ್ತಿ ಮೇಳದ ಪ್ರಧಾನ ವೇಷ ಧಾರಿ ಕಲಾವಿದ ಸಾಧು ಕೊಠಾರಿ (58) ರಂಗ ಸ್ಥಳದಲ್ಲೇ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವ ಮುನ್ನ ಕೊನೆಯುಸಿರೆಳೆದರು.
ಕಳೆದ 40 ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸಿದ ಸಾಧು ಬಾರ್ಕೂರಿನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು.
ಉಡುಪಿ ಜಿಲ್ಲೆಯ ಕೋಟಾ ಸಮೀಪದ
ಕಲ್ಪೆಟ್ಟುವಿನಲ್ಲಿ ಮಹಾಬಲಿ ಮಗದೇಂದ್ರ ಯಕ್ಷಗಾನ ಪ್ರಸಂಗ ನಡೆಯುತ್ತಿದ್ದಾಗ ಬೆಳಗಿನ ಜಾವ 3 ಗಂಟೆಯ ವೇಳೆಗೆ ರಂಗಸ್ಥಳದಲ್ಲೇ ಕುಸಿದು ಬಿದ್ದರು.
ಕೂಡಲೇ ಕಲಾವಿದರಾದ ಸದಾಶಿವ ಅಮೀನ್ ಹಾಗೂ ಇತರ ಕಲಾವಿದರ ತಂಡ ಸಾಧು ಅವರ ವೇಷ ಬದಲಿಸಿ ಕೂಡಲೇ ಆಸ್ಪತ್ರೆ ಗೆ ಸಾಗಿಸುವ ಮುನ್ನ ಕೊನೆಯುಸಿರೆಳೆದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು