ಉಕ್ರೇನ್ ಮೇಲೆ ರಷ್ಯಾ ಸೇನೆ ನಡೆಸಿರುವ ಅಮಾನವಿಯ ದಾಳಿ ಮನಕಲಕುವ ದುರಂತ ಜರುಗಿದೆ. ವಲೆರಿಯಾ ಮಕ್ಸೆಟ್ಸ್ಕಾ ( 31) ಎಂಬ ಮಹಿಳೆ ಅನಾರೋಗ್ಯ ಪೀಡಿತ ಅಮ್ಮನಿಗೆ ಔಷಧಿ ತರಲು ಹೋದಾಗ ರಷ್ಯಾ ಸೇನೆ ದಾಳಿ ನಡೆಸಿ ಹತ್ಯೆಗೈದಿದೆ.
ಕೀವ್ನಲ್ಲಿ ನಡೆದಿರುವ ಈ ಘಟನೆ ಮನಮಿಡಿಯುತ್ತಿದೆ.
ವಲೆರಿಯಾ ಎಂಬ ಮಹಿಳೆಯ ಅಮ್ಮ ಐರನಾ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಆಕೆ ಅಮ್ಮನನ್ನು ಕಾರಿನಲ್ಲಿ ಕೂರಿಸಿಕೊಂಡು ಚಾಲಕನ ಜೊತೆ ಕೀವ್ ನಗರದಲ್ಲಿ ಔಷಧಿಗಾಗಿ ಅಲೆಯುತ್ತಿದ್ದಳು.
ಔಷಧಿ ಹುಡುಕಲು ಆಕೆ ಕಾರಿನಿಂದ ಇಳಿದು, ಮೆಡಿಕಲ್ ಶಾಪ್ಗೆ ಹೋಗುತ್ತಾಳೆ . ಈ ವೇಳೆ ರಷ್ಯಾ ಸೇನೆ ಟ್ಯಾಂಕ್ ಮೂಲಕ ದಾಳಿ ನಡೆಸಿದೆ. ಪರಿಣಾಮ ಅಲ್ಲಿಯೇ ಆಕೆ ಸಾವನ್ನಪ್ಪಿದ್ದಾಳೆ.
ಮತ್ತೊಂದು ಕಡೆ ರಷ್ಯಾದ ಸೇನೆಯ ವ್ಯವಸ್ಥಿತ ಸಂಚಿನ ಪರಿಣಾಮ ಇನ್ನೊಂದು ದಾಳಿಯಲ್ಲಿ ಕಾರಿನಲ್ಲಿದ್ದ ಆಕೆಯ ಚಾಲಕ ಹಾಗೂ ಅಮ್ಮನೂ ಕೂಡ ಉಸಿರು ಚೆಲ್ಲಿದ್ದಾರೆ
ವಲೆರಿಯಾ ಮಕ್ಸೆಟ್ಸ್ಕಾ, ವೈದ್ಯೆಯಾಗಿದ್ದರು. ರಷ್ಯಾ ದಾಳಿ ನಂತರ, ಉಕ್ರೇನ್ ನಾಗರಿಕರಿಗೆ ಅನುಕೂಲ ಆಗಲಿ, ಅವರ ಬದುಕಿಗೆ ತಮ್ಮಿಂದ ಸಹಾಯ ಮಾಡಬೇಕು ಎಂದು ನಿರ್ಧರಿಸಿ ಕೀವ್ನಲ್ಲಿಯೇ ಉಳಿದುಕೊಂಡಿದ್ದರು.
ಆದರೆ ದೇಶದ ನಾಗರಿಕರಿಗೋಸ್ಕರ ಉಳಿದುಕೊಂಡಿದ್ದ ಆಕೆ, ತಮ್ಮ ಅಮ್ಮನನ್ನು ಬದುಕಿಸಿಕೊಳ್ಳಲು ಹೋಗಿ ಸಾವನ್ನಪ್ಪಿದ್ದಾರೆ.
ಈಕೆ ಹುತಾತ್ಮಳಾಗಿದ್ದಾಳೆ ಎಂದು ಉಕ್ರೇನ್ ಸರ್ಕಾರ ಹಾಗೂ ಅಮೆರಿಕ ಸುದ್ದಿ ಸಂಸ್ಥೆಗಳು ಬಣ್ಣಿಸಿವೆ. ಅಲ್ಲದೇ ರಷ್ಯಾ ದ ಈ ರೀತಿಯ ಅಮಾನವೀಯ ದಾಳಿಯನ್ನು ಕಟುವಾಗಿ ಟೀಕಿಸಿವೆ.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ