November 13, 2024

Newsnap Kannada

The World at your finger tips!

lasike1

ಕೋವಿಶೀಲ್ಡ್ ಲಸಿಕಾ ಅಭಿಯಾನಕ್ಕೆ ಚಾಲನೆ: ಪುಣೆಯಿಂದ ಲಸಿಕೆ ರವಾನೆ

Spread the love

ಕೊರೊನಾ ವೈರಸ್‌ ವಿರುದ್ಧದ ಭಾರತದ ಹೋರಾಟದ ನಿರ್ಣಾಯಕ ಕಾಲ ಘಟ್ಟ ತಲುಪಿದೆ.

ನಾಲ್ಕು ದಿನಗಳಲ್ಲಿ ಆರಂಭವಾಗಲಿರುವ ಸಾರ್ವತ್ರಿಕ ಲಸಿಕಾ ಕಾರ್ಯಕ್ಕಾಗಿ ಪುಣೆಯ ‘ಸೀರಂ ಇನ್‌ಸ್ಟಿಟ್ಯೂಟ್‌’ನಿಂದ ಲಸಿಕೆಗಳನ್ನು ವಿಮಾನ ನಿಲ್ದಾಣಕ್ಕೆ ರವಾನಿಸಲಾಯಿತು. ಅಲ್ಲಿಂದ ವಿವಿಧ ಸ್ಥಳಗಳಿಗೆ ಲಸಿಕೆ ಸಾಗಿಸಲಾಗಿದೆ.

‘ಮೂರು ತಾಪಮಾನ-ನಿಯಂತ್ರಿತ ಟ್ರಕ್‌ಗಳು ‘ಸೀರಮ್ ಇನ್‌ಸ್ಟಿಟ್ಯೂಟ್’ನಿಂದ ಲಸಿಕೆಗೆಗಳನ್ನು ಹೊತ್ತು ಬೆಳಿಗ್ಗೆ 5 ಗಂಟೆಗೆ ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿದವು.

ಮೂರು ಟ್ರಕ್‌ಗಳು ಒಟ್ಟು 478 ಲಸಿಕೆ ಪೆಟ್ಟಿಗೆಗಳನ್ನು ಸಾಗಿಸಿದವು. ಪ್ರತಿ ಬಾಕ್ಸ್ 32 ಕೆಜಿ ತೂಕವಿರುತ್ತದೆ,’ ಎಂದು ಲಸಿಕೆ ಸಾಗಾಟ ವ್ಯವಸ್ಥೆಯಲ್ಲಿ ತೊಡಗಿವೆ.

ಸೀರಂ ಇನ್‌ಸ್ಟಿಟ್ಯೂಟ್‌ ಆವರಣದಿಂದ ಟ್ರಕ್‌ಗಳು ಹೊರಡುವುದಕ್ಕೂ ಮೊದಲು, ಅವುಗಳಿಗೆ ಪೂಜೆ ಸಲ್ಲಿಸಲಾಯಿತು.

ಪುಣಿಯಿಂದ ಹೊರಟಿರುವ ಈ ಕೋವಿಶೀಲ್ಡ್ ಲಸಿಕೆಗಳನ್ನು ದೆಹಲಿ, ಅಹಮದಾಬಾದ್, ಕೋಲ್ಕತಾ, ಚೆನ್ನೈ, ಬೆಂಗಳೂರು, ಕರ್ನೂಲ್‌, ಹೈದರಾಬಾದ್, ವಿಜಯವಾಡ, ಗುವಾಹಟಿ, ಲಖನೌ, ಚಂಡೀಗಡ ಮತ್ತು ಭುವನೇಶ್ವರಕ್ಕೆ ತಲುಪಿಸಲಾಗುತ್ತದೆ. ಎರಡು ಕಾರ್ಗೋ ವಿಮಾನ ಸೇರಿದಂತೆ ಒಟ್ಟು 8 ವಾಣಿಜ್ಯ ವಿಮಾನಗಳ ಮೂಲಕ ಲಸಿಕೆಗಳನ್ನು ಸಾಗಿಸಲಾಗುತ್ತಿದೆ. ಮುಂಬೈಗೆ ರಸ್ತೆ ಮಾರ್ಗವಾಗಿ ಲಸಿಕೆ ತಲುಪಲಿದೆ.

ಜ.16ರಂದು ದೇಶದಲ್ಲಿ ಲಸಿಕಾ ಅಭಿಯಾನ

‘ದೇಶದ ಮೂರು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ನೀಡುವ, ಮೊದಲ ಹಂತದ ಲಸಿಕಾ ಕಾರ್ಯಕ್ರಮದ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಲಸಿಕೆ ನೀಡಲಾಗುವುದು. ಇದರಲ್ಲಿ ಜನಪ್ರತಿನಿಧಿಗಳು, ರಾಜಕಾರಣಿಗಳು ಪಾಲ್ಗೊಳ್ಳಬಾರದು,’ ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!