February 26, 2026

Newsnap Kannada

The World at your finger tips!

election , politics , JDS

ನೀಲಿ ಚಿತ್ರ ನೋಡುವುದನ್ನು ಬಿಜೆಪಿಗೆ ಆರ್ ಎಸ್ ಎಸ್ ಕಲಿಸಿದೆ – ಎಚ್ ಡಿ ಕೆ ಮತ್ತೆ ವಾಗ್ದಾಳಿ

Spread the love

ಆರ್‌ಎಸ್‌ಎಸ್‌ ನೀಲಿಚಿತ್ರ ನೋಡೋದನ್ನು ಕಲಿಸಿಕೊಟ್ಟಿದೆ.
ಆ ಶಾಖೆಯಲ್ಲಿ ಕಲಿತವರೇ ನೀಲಿಚಿತ್ರ ನೋಡಿರೋದು ಎಂದು ಆರ್‌ಎಸ್‌ಎಸ್‌ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಿಂದಗಿಯ ಬೊಮ್ಮನಹಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಆರ್‌ಎಸ್‌ಎಸ್‌ ಶಾಖೆಗೆ ಕುಮಾರಸ್ವಾಮಿ ಬರಲಿ ಎಂದು ಕಟೀಲ್ ಹೇಳಿದ್ದಾರೆ. ಆರ್‍ಎಸ್‍ಎಸ್ ಕಲಿಸಿಕೊಟ್ಟಿರೋದೇ ನೀಲಿಚಿತ್ರ ನೋಡುವುದಾಗಿದೆ. ಆ ಶಾಖೆಯಲ್ಲಿ ಕಲಿತವರೇ ನೀಲಿಚಿತ್ರ ನೋಡಿರುವುದಾಗಿದೆ. ನಾನು ಆ ಶಾಖೆಯಲ್ಲಿ ಕಲಿಯೋದು ಬೇಕಿಲ್ಲ, ನಂಗೆ ಈ ಜನರ ಜೊತೆಗೆ ಕಲಿಯುವುದಷ್ಟೇ ಸಾಕು ಎಂದು ಹೆಚ್‍ಡಿಕೆ ತೀರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂದ ಕಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಯಾವಾಗ್ಲೂ ಅಂತಹ ಕೀಳು ಮಟ್ಟಕ್ಕೆ ಇಳಿಯಲ್ಲ, ಯಾರೂ ಅಂತಹ ಹೇಳಿಕೆಗಳನ್ನು ನೀಡಬಾರದು. ಯಾರೇ ಆಗಲಿ ಯಾರದ್ದೇ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಬಾರದು. ಎಂದರು.

error: Content is protected !!