ಐಪಿಎಲ್ 20-20ಯ 38ನೇ ಪಂದ್ಯದಲ್ಲಿ ಎಸ್‌ಆರ್‌ಹೆಚ್ ತಂಡ, ಆರ್‌ಆರ್ ತಂಡದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ವಿಜಯ ಸಾಧಿಸಿತು.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಸ್‌ಆರ್‌ಹೆಚ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಆರ್‌ಆರ್ ತಂಡದಿಂದ ರಾಬಿನ್ ಉತ್ತಪ್ಪ ಹಾಗೂ ಬಿ.ಸ್ಟೋಕ್ಸ್ ಮೈದಾನಕ್ಕಿಳಿದು ಆಟ ಆರಂಭಿಸಿದರು. ಉತ್ತಪ್ಪ 13 ಬಾಲ್‌ಗಳಿಗೆ 19 ರನ್ ಗಳಿಸಿದರೆ, ಸ್ಟೋಕ್ಸ್ 32 ಬಾಲ್‌ಗಳಿಗೆ 30 ರನ್‌ಗಳ ಉತ್ತಮ ಆಟವನ್ನು ಆಡಿದರು. ನಂತರ ಬಂದ ಎಸ್. ಸ್ಯಾಮ್ಸನ್ 26 ಬಾಲ್‌ಗಳಿಗೆ 36 ರನ್ ಗಳಿಸದರೂ ಸಹ ತಂಡ ಸೋಲಿನಂಚನ್ನು ಕಂಡಿತು. ಆರ್‌ಆರ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್‌ಗಳನ್ನು ಮಾತ್ರ ಗಳಿಸಿತು.
ಆರ್‌ಆರ್ ತಂಡ ನೀಡಿದ ಗುರಿಯನ್ನು ಬೆಂಬತ್ತಿದ ಎಸ್‌ಆರ್‌ಹೆಚ್ ಗುರಿಯನ್ನು ಸುಲಭವಾಗಿಯೇ ಸಾಧಿಸಿತು. ಎಸ್‌ಆರ್‌ಹೆಚ್ ತಂಡದಿಂದ ಡಿ. ವಾರ್ನರ್ (4 ಬಾಲ್‌ಗಳಿಗೆ 4 ರನ್) ಹಾಗೂ ಜೆ. ಬೇರ್ಸ್ಟೋವ್ (7 ಬಾಲ್‌ಗಳಿಗೆ 10 ರನ್) ಆಟ ಆರಂಭ ಮಾಡಿದರು. ಆದರೆ ಆರಂಭಿಕ ಅಷ್ಟೇನು ಉತ್ತಮವಾಗಿರಲಿಲ್ಲ. ನಂತರ ಬಂದ ಮನೀಶ್ ಪಾಂಡೆ ಮತ್ತು ವಿ. ಶಂಕರ್ ಉತ್ತಮ ಪ್ರದರ್ಶನವನ್ನು ನೀಡಿ ತಂಡ ಗೆಲ್ಲುವಂತೆ ಮಾಡಿದರು. ಪಾಂಡೆ 47 ಬಾಲ್‌ಗಳಿಗೆ 83 ರನ್ ಹಾಗೂ ಶಂಕರ್ 51 ಬಾಲ್‌ಗಳಿಗೆ 52 ರನ್‌ಗಳ ಮಿಂಚಿನಾಟ ಆಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಎಸ್‌ಆರ್‌ಹೆಚ್ ತಂಡ 18.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿ ಪಂದ್ಯದಲ್ಲಿ ಅದ್ಭುತ ಗೆಲುವು ಸಾಧಿಸಿತು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು