ಐಪಿಎಲ್ 20-20ಯ 36ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 7 ವಿಕೆಟ್‌ಗಳ ವಿಜಯ ಸಾಧಿಸಿತು.
ದುಬೈನ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಸಿಎಸ್‌ಕೆ ತಂಡದಿಂದ ಆರಂಭಿಕ ಆಟಗಾರರಾಗಿ ಎಸ್. ಕರನ್ ಹಾಗೂ ಫಾಫ್ ಡು ಪ್ಲೆಸ್ಸಿಸ್ ಫೀಲ್ಡಿಗಿಳಿದರು. ಆದರೆ ತನ್ನ ಆಟದಲ್ಲಿನ ಕಸುವನ್ನು ಸಿಎಸ್‌ಕೆ ತಂಡ ಕಳೆದುಕೊಂಡಿತ್ತು. ಕರನ್ 25 ಬಾಲ್‌ಗಳಿಗೆ 22 ರನ್ ಗಳಿಸಿದರೆ, ಪ್ಲೆಸ್ಸಿಸ್ 9 ಬಾಲ್‌ಗಳಿಗೆ 10 ರನ್ ಗಳಿಕೆ ಮಾಡಿದರು. ನಂತರ ಬಂದ ಧೋನಿ ಹಾಗೂ ರವೀಂದ್ರ ಜಡೇಜಾ ಅವರು ಕ್ರಮವಾಗಿ 28 ಹಾಗೂ 35 ರನ್‌ಗಳನ್ನು ಗಳಿಸಲಷ್ಟೇ ಶಕ್ತರಾದರು. ಸಿಎಸ್‌ಕೆ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 125 ರನ್‌ಗಳ ಸಾಧಾರಣ ಗಳಿಕೆ ಮಾಡಿತು.
ಸಿಎಸ್‌ಕೆಯ ಅತ್ಯಂತ ಸಾಧಾರಣ ಚಾಲೆಂಜ್ ಸ್ವೀಕರಿಸಿದ ಆರ್‌ಆರ್ ತಂಡದಿಂದ ಬಿ. ಸ್ಟೋಕ್ಸ್ ಹಾಗೂ ರಾಬಿನ್ ಉತ್ತಪ್ಪ ಮೈದಾನಕ್ಕಿಳಿದರು. ಸ್ಟೋಕ್ಸ್ 11 ಬಾಲ್‌ಗಳಿಗೆ 19 ರನ್ ಹಾಗೂ 9 ಬಾಲ್‌ಗಳಿಗೆ 4 ರನ್ ಗಳಿಕೆ ಮಾಡಿದರು. ಆಟವನ್ನು ಇಂದು ನಿಜವಾಗಿ ಗೆಲ್ಲಿಸಿದ್ದು ಜೆ. ಬಟ್ಲರ್. ಬಟ್ಲರ್ 48 ಬಾಲ್‌ಗಳಿಗೆ 70 ರನ್‌ಗಳ ದೊಡ್ಡ ಮೊತ್ತ ನೀಡಿದರು. ಸ್ಮಿತ್ ಸಹ 26 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪಾಲು ಹಂಚಿಕೊಂಡರು. ಆರ್‌ಆರ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ