Karnataka

ನಾಳೆ ಪ್ರಧಾನ ಮಂತ್ರಿಗಳ ಕಾರ್ಯಕ್ರಮಕ್ಕೆ ತೆರಳುವ ವಾಹನಗಳ ಮಾರ್ಗದ ವಿವರ

ಪ್ರಧಾನ ಮಂತ್ರಿ ಮೋದಿ ನಾಳೆ ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ ಕಾಲೋನಿ ಬಳಿ ಬೆಂಗಳೂರು – ಮೈಸೂರು ರಾಷ್ಟ್ರೀಯ ದಶಪಥ ರಸ್ತೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಈ ಹಿನ್ನಲೆಯಲ್ಲಿ ಮಾರ್ಚ್ 12 ರ ಬೆಳಿಗ್ಗೆ 7 ಗಂಟೆಯಿಂದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.

ಅಗತ್ಯಸೇವೆ ಮತ್ತು ಹಾಲಿನ ವಾಹನಗಳಿಗೆ ಮಾತ್ರ ಬೆಳಿಗ್ಗೆ 9 ಗಂಟೆಯವರೆಗೆ ಸರ್ವೀಸ್ ರಸ್ತೆಯಲ್ಲಿ ತೆರಳಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್‌ ತೀವ್ರ ಹೃದಯಾಘಾತದಿಂದ ನಿಧನ

  • ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಕಾಲೋನಿಯ ಬಳಿ ನಡೆಯುವ ಮಾನ್ಯ ಪ್ರದಾನ ಮಂತ್ರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ವಾಹನಗಳಿಗೆ ಈ ಕೆಳಕಂಡಂತೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
  • ಮಳವಳ್ಳಿ ಕಡೆಯಿಂದ ಬರುವ ವಾಹನಗಳು ಕೆ.ಎಂ.ದೊಡ್ಡಿ-ಹುಣ್ಣನದೊಡ್ಡಿ, ಬೋರಾಪರ ಗೇಟ್ ಮಾರ್ಗವಾಗಿ ಮದ್ದೂರಿಗೆ 04 ಕಿಲೋ ಮೀಟರ್ ಹಿಂದಕ್ಕೆ ಎಡಗಡೆ ಕುದುರುಗುಂಡಿ ಕಾಲೋನಿಗೆ ಹೋಗುವ ಮಾರ್ಗದಲ್ಲಿ ಹೋಗಿ ಪಾರ್ಕಿಂಗ್ ಸ್ಥಳಕ್ಕೆ ತೆರಳುವುದು.
  • ಮದ್ದೂರು ಮತ್ತು ಸುತ್ತಮುತ್ತಲ ಕಡೆಯಿಂದ ತೆರಳುವ ವಾಹನಗಳು, ಮದ್ದೂರು- ಐ.ಬಿ.ವೃತ್ತ- ಮಳವಳ್ಳಿ
    ರಸ್ತೆಯಿಂದ ಸುಮಾರು 04 ಕಿ.ಮೀ ಮುಂದಕ್ಕೆ ಹೋಗಿ ಬಲಗಡೆಗೆ ಕುದುರುಗುಂಡಿ ಕಾಲೋನಿಗೆ ಹೋಗುವ ಮಾರ್ಗದಲ್ಲಿ ಹೋಗಿ ಪಾರ್ಕಿಂಗ್ ಸ್ಥಳಕ್ಕೆ ತೆರಳುವುದು.
  • ಗೆಜ್ಜಲಗೆರೆ ಸುತ್ತಮುತ್ತಲ ಗ್ರಾಮಗಳಿಂದ ತೆರಳುವವರು ಗೆಜ್ಜಲಗೆರೆ ಅಂಡರ್‍ಪಾಸ್‍ನಿಂದ ಕುದುರುಗುಂಡಿ ಗ್ರಾಮ, ಸಾದೋಳಲು ಕುದುರುಗುಂಡಿ ಕಾಲೋನಿ ಮಾರ್ಗವಾಗಿ ಪಾರ್ಕಿಂಗ್ ಜಾಗಕ್ಕೆ ತೆರಳುವುದು
  • ಮಂಡ್ಯ ಕಡೆಯಿಂದ ಬರುವ ವಾಹನಗಳು ಹನಕೆರೆ ಸರ್ವೀಸ್ ರೋಡ್‍ನಿಂದ ಗೆಜ್ಜಲಗೆರೆ ಗ್ರಾಮದ ಬಳಿಬಂದು ಗೆಜ್ಜಲಗೆರೆ ಅಂಡರ್‍ಪಾಸ್‍ನಿಂದ ಕುದುರುಗುಂಡಿ ಗ್ರಾಮ, ಸಾದೋಳಲು ಕುದುರುಗುಂಡಿ ಕಾಲೋನಿ ಮಾರ್ಗವಾಗಿ ಪಾರ್ಕಿಂಗ್ ಜಾಗಕ್ಕೆ ತೆರಳುವುದು.
Team Newsnap
Leave a Comment
Share
Published by
Team Newsnap

Recent Posts

ಪ್ರೀತಿಯೆಂದರೆ…. ಇಷ್ಟೇನಾ

(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More

May 1, 2024

2024ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

ನವದೆಹಲಿ : ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್‍ಗಾಗಿ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಇಂದು ಭಾರತೀಯ ಕ್ರಿಕೆಟ್… Read More

April 30, 2024

ಅಧಿಕೃತವಾಗಿ ಪ್ರಜ್ವಲ್ ರೇವಣ್ಣ ಜೆಡಿಎಸ್ ಪಕ್ಷದಿಂದ ಅಮಾನತು

ಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣರನ್ನು ಅಮಾನತು ಮಾಡಿ ಜೆಡಿಎಸ್… Read More

April 30, 2024

ನಾಳೆಯಿಂದ 14 ಕ್ಷೇತ್ರಗಳಲ್ಲಿ 2ನೇ ಹಂತದ ಅಂಚೆ ಮತದಾನ

ಬೆಂಗಳೂರು : ರಾಜ್ಯದ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯ ಸೇವೆಗಳ ಇಲಾಖೆಗಳ ಸಿಬ್ಬಂದಿಗೆ ನಾಳೆಯಿಂದ 3 ದಿನಗಳ… Read More

April 30, 2024

SSLC ಪರೀಕ್ಷೆ : ಮೇ.10ರಂದು ಫಲಿತಾಂಶ ಪ್ರಕಟ

ಬೆಂಗಳೂರು : ಮೇ 10ರಂದು - ಪ್ರಸಕ್ತ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ಇಲಾಖೆ ಎಲ್ಲಾ ರೀತಿಯ ಸಿದ್ದತೆಗಳನ್ನು… Read More

April 30, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಏಪ್ರಿಲ್ 30 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,550 ರೂಪಾಯಿ ದಾಖಲಾಗಿದೆ. 24… Read More

April 30, 2024