ಟೀಮ್ ಇಂಡಿಯಾ ಈಗ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಯಲ್ಲಿ ಬಲಿಷ್ಠ ಪ್ರದರ್ಶನ ನೀಡುತ್ತಿದ್ದು, ಪ್ರಮುಖ ಆಟಗಾರರು ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ಕೆಎಲ್ ರಾಹುಲ್, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ ಸೇರಿ ಹಲವರು ತಮ್ಮ ಅಮೋಘ ಆಟದ ಮೂಲಕ ಗಮನ ಸೆಳೆದಿದ್ದಾರೆ.
ರೋಹಿತ್ ಶರ್ಮಾ ಕೂಡ ಸಾಂಪ್ರದಾಯಿಕ ಶೈಲಿಯಲ್ಲಿ ಆಡುತ್ತಿದ್ದು, ಫೈನಲ್ ಪಂದ್ಯದಲ್ಲಿ ಭರ್ಜರಿ ಆಟ ಮಾಡುವ ನಿರೀಕ್ಷೆ ಇದೆ. 37 ವರ್ಷ ವಯಸ್ಸಿನ ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿಯ ಬಳಿಕ ನಿವೃತ್ತಿ ಪಡೆಯುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ.
ಟಿ20 ನಿವೃತ್ತಿಯ ಬಳಿಕ ಏಕದಿನಕ್ಕೂ ವಿದಾಯ?
ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಗೆಲುವಿನ ಬಳಿಕ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ರೋಹಿತ್ ಶರ್ಮಾ ಈ ಫಾರ್ಮ್ಯಾಟ್‌ಗೆ ವಿದಾಯ ಹೇಳಿದ್ದರು. ಆದರೆ ಈಗ ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿಯ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಬಹುದು ಎಂಬ ವರದಿಗಳು ಚರ್ಚೆಗೆ ಗ್ರಾಸವಾಗಿವೆ.
ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮುಗಿದ ಬಳಿಕ ರೋಹಿತ್ ಶರ್ಮಾ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ನಿರ್ಧಾರ ಟೀಮ್ ಇಂಡಿಯಾಗೆ ದೊಡ್ಡ ನಷ್ಟವಾಗಬಹುದು, ಏಕೆಂದರೆ ಅವರು ಒಬ್ಬ ಮಹಾನ್ ನಾಯಕ ಹಾಗೂ ಶ್ರೇಷ್ಠ ಬ್ಯಾಟರ್ ಆಗಿದ್ದಾರೆ.
ರೋಹಿತ್ ಶರ್ಮಾ ಏನು ಹೇಳಿದ್ದಾರೆ?
ರೋಹಿತ್ ಶರ್ಮಾ ಇತ್ತೀಚಿಗೆ “ನಾನು ಇನ್ನೂ ಕೆಲವು ವರ್ಷ ಕ್ರಿಕೆಟ್ ಆಡುತ್ತೇನೆ” ಎಂದು ಸ್ಪಷ್ಟಪಡಿಸಿದ್ದರು. ಆದರೂ, ಅವರು ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುತ್ತಾರಾ? ಎಂಬ ಅನುಮಾನಗಳು ಮಾದ್ಯಮಗಳಲ್ಲಿ ನಿರಂತರವಾಗಿ ಮೂಡುತ್ತಿವೆ.ಇದನ್ನು ಓದಿ –ನೀಟ್ ಯುಜಿ 2025 ನೋಂದಣಿಗೆ ಇಂದು ಕೊನೆಯ ದಿನ
ಟೀಮ್ ಇಂಡಿಯಾ ಮುಂದಿನ ಏಕದಿನ ಪಂದ್ಯವನ್ನು ಆಗಸ್ಟ್‌ನಲ್ಲಿ ಆಡಲಿದ್ದು, ಅದಕ್ಕೂ ಮುನ್ನ ರೋಹಿತ್ ಶರ್ಮಾ ತಮ್ಮ ಭವಿಷ್ಯದ ನಿರ್ಧಾರ ಪ್ರಕಟಿಸಬಹುದೇ? ಎಂಬ ಕುತೂಹಲ ಇರುತ್ತದೆ. ಈ ಬಗ್ಗೆ ಖಚಿತ ಮಾಹಿತಿಗಾಗಿ ಅಭಿಮಾನಿಗಳು ಕಾದು ನೋಡಬೇಕಾಗಿದೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು