ವಿಶ್ವ ವಿಖ್ಯಾತ ನಾಡಹಬ್ಬ ದಸರಾಗೆ ಯಾವುದೇ ವಿಘ್ನವಾಗದಂತೆ ಸಂಪನ್ನಗೊಳ್ಳಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಾಯಿ ಚಾಮುಂಡೇಶ್ವರಿ ಮಾತೆಯಲ್ಲಿ ಹರಕೆ ಹೊತ್ತಿದ್ದರು.
ದಸರಾ ಹಬ್ಬ ಸಾಂಗವಾಗಿ ಜರುಗಿದ ನಂತರ ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ತಾಯಿ ಚಾಮುಂಡಿಯ ಪಲ್ಲಕ್ಕಿ ರಥ ಎಳೆದು ಹರಕೆ ಈಡೇರಿಸಿದ್ದಾರೆ
ಸೋಮವಾರ ಜಂಬೂ ಸವಾರಿ ಯಶಸ್ವಿಯಾಗಿ ಮುಗಿಯುತ್ತಿದ್ದಂತೆ ಸಂಜೆ ತಂದೆ, ತಾಯಿ, ಪತಿ ಹಾಗೂ ಮಗುವಿನೊಂದಿಗೆ ಭೇಟಿನೀಡಿದ ರೋಹಿಣಿಯವರು ತಮ್ಮ ಹರಕೆ ಪೂರೈಸಿದರು.
ದಸರಾದ ಸಮಯದಲ್ಲೇ ಮೈಸೂರಿನ ಜಿಲ್ಲಾಧಿಕಾರಿಯಾಗಿ ವರ್ಗವಾಗಿದ್ದ ರೋಹಿಣಿಯವರು, ನವರಾತ್ರಿಯ 9 ದಿನಗಳೂ ರೋಹಿಣಿಯವರು ದಸರಾ ಹಬ್ಬ ಸುಸೂತ್ರವಾಗಿ ನೆರವೇರಲೆಂದು ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ್ದರು. ಸೋಮವಾರ ಸಂಜೆ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ ಹರಕೆ ಪೂರ್ಣಗೊಳಿಸಿದರು.
More Stories
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ