April 10, 2025

Newsnap Kannada

The World at your finger tips!

baby cradel

ಅಂಬರೀಶ್ ಆಸೆಯನ್ನು ಈಡೇರಿಸಿದ ರಾಕಿಂಗ್ ಸ್ಟಾರ್ ಯಶ್

Spread the love

ಬೆಂಗಳೂರು, ಮಾರ್ಚ್ 05: ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ಹಿರಿಯ ನಟ ಅಂಬರೀಶ್ ಅವರ ಮಧ್ಯೆ ವಿಶೇಷ ಸಂಬಂಧವಿತ್ತು. ಅನೇಕ ವರ್ಷಗಳಿಂದ ಅಂಬಿ ಕುಟುಂಬದೊಂದಿಗೆ ಯಶ್ ಬೆಸೆಯೂ ಇಟ್ಟಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದಾಗ, ಯಶ್ ಮತ್ತು ದರ್ಶನ್ ಜಂಟಿಯಾಗಿ ಅವರ ಪರ ಪ್ರಚಾರ ನಡೆಸಿದರು. ಈ ಬೆಂಬಲದಿಂದಲೇ ಸುಮಲತಾ ಸಂಸದೆಯಾಗಿ ಆಯ್ಕೆ ಆಗಿದ್ದರು.

ಯಶ್ ಮತ್ತು ಅಂಬರೀಶ್ ಡ್ರಾಮಾ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಯಶ್ ಅಂಬರೀಶ್ ಕುಟುಂಬದೊಂದಿಗೆ ಉತ್ತಮ ಒಡನಾಟ ಹೊಂದಿರುವುದರಿಂದ, ಅವರು ಸುಮಲತಾ ಆಯೋಜಿಸುವ ವಿವಿಧ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ. ಇದೀಗ, ಅಂಬರೀಶ್ ಅವರ ಬಹುಕಾಲದ ಆಸೆಯನ್ನು ಯಶ್ ಅವರು ಈಡೇರಿಸಿದ್ದಾರೆ, ಇದರಿಂದಾಗಿ ಅಂಬರೀಶ್‌ ಮೇಲೆ ಅವರಿಗಿರುವ ಗೌರವ ಸ್ಪಷ್ಟವಾಗಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿಯೂ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಯಶ್ ಮಗಳಿಗೆ ಜನ್ಮವಾದಾಗ, ಮನೆಯಲ್ಲೇ ಸಂಭ್ರಮ ಮನೆ ಮಾಡಿತ್ತು. ಆಗ ಅಂಬರೀಶ್ ಕಲಘಟಗಿಯಲ್ಲಿ ತಯಾರಿಸಿದ ವಿಶಿಷ್ಟ ತೊಟ್ಟಿಲು ಮಾಡುವಂತೆ ಸೂಚಿಸಿದ್ದರು. ಯಶ್ ಅದನ್ನು ಅಂಬರೀಶ್ ನೆನಪಿಗಾಗಿ ಸಂಗ್ರಹಿಸಿಕೊಂಡಿದ್ದರು.

ಇತ್ತೀಚೆಗೆ ಅಭಿಷೇಕ್ ಅಂಬರೀಶ್‌ಗೆ ಗಂಡುಮಗು ಜನಿಸಿದ ಹಿನ್ನೆಲೆಯಲ್ಲಿ, ಯಶ್ ಅವರು ಕಲಘಟಗಿಯಲ್ಲಿ ವಿಶೇಷ ತೊಟ್ಟಿಲು ತಯಾರಿಸಿ ಕಳುಹಿಸಿದ್ದಾರೆ. ಶೀಘ್ರದಲ್ಲೇ ತೊಟ್ಟಿಲು ಶಾಸ್ತ್ರ ನಡೆಯಲಿದ್ದು, ಅಂಬರೀಶ್ ಅವರ ಆಶಯದಂತೆ, ಮಗುವನ್ನು ಕಲಘಟಗಿ ತೊಟ್ಟಿಲಿನಲ್ಲಿ ಮಲಗಿಸಿ ತೂಗಿಸುವ ಪರಿಕಲ್ಪನೆಯನ್ನು ಯಶ್ ನೆನೆಸಿಕೊಂಡಿದ್ದಾರೆ.ಇದನ್ನು ಓದಿ –ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ: ಬೈಕ್ ಸವಾರರಿಗೆ ನಿಷೇಧ!

ಈ ವಿಶಿಷ್ಟ ತೊಟ್ಟಿಲು ಯಶ್ ಅವರಿಂದ ಅಭಿಷೇಕ್ ಕುಟುಂಬಕ್ಕೆ ನೀಡಿದ ಅಮೂಲ್ಯ ಉಡುಗೊರೆ. ಇದರಿಂದ ಅಂಬರೀಶ್ ಅಭಿಮಾನಿಗಳಿಗೂ ಖುಷಿ ಆಗಿದೆ.

Copyright © All rights reserved Newsnap | Newsever by AF themes.
error: Content is protected !!