ಸ್ಯಾಂಡಲ್‌ವುಡ್‌ನ ಬಾಕ್ಸ್ ಆಫೀಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ರಾಬರ್ಟ್ ಚಲನಚಿತ್ರ ಡಿ. 25ಕ್ಕೆ ಬೆಳ್ಳಿ ಪರದೆ ಮೇಲೆ ವಿಜೃಂಭಿಸಲಿದೆ.
ಕೋವಿಡ್ ಕಾರಣವಾಗಿ 8 ತಿಂಗಳಿನಿಂದ ಚಿತ್ರಮಂದಿರ ಮುಚ್ಚಿಹೋಗಿದ್ದವು. ಅನೇಕ ಕಲಾವಿದರು ಪಡಬಾರದ ಕಷ್ಟ ಪಟ್ಟಿದ್ದರು. ಈಗ ಮತ್ತೆ ಷರತ್ತುಬದ್ಧ ನಿಯಮಗಳೊಂದಿಗೆ ಚಿತ್ರಮಂದಿರಗಳು ಪ್ರಾರಂಭವಾಗಿರುವುದು ಚಿತ್ರರಂಗದ ಚೇತರಿಕೆಗೆ ಕಾರಣವಾಗಿದೆ.
2 ತಿಂಗಳಿನ ಹಿಂದೆ ಕೆಲವು ಷರತ್ತುಗಳ ಮೂಲಕ ಕಿರುತೆರೆಯ ಚಟುವಟಿಕೆಗಳು ಆರಂಭವಾಗಿದ್ದವು. ನಂತರ ಚಿತ್ರರಂಗದ ಚಟುವಟಿಕೆಗಳೂ ಸಹ ಆರಂಭಗೊಂಡಿದ್ದವು. ಈಗ ನಿಯಮಗಳೊಂದಿಗೆ ಚಿತ್ರಮಂದಿರಗಳೂ ಆರಂಭವಾಗಿವೆ.
ಡಿಸೆಂಬರ್ ವೇಳೆಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಿರುವ ಚಿತ್ರತಂಡ ಅದೇ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದೆ.
More Stories
ನಾಳೆ ರಾಜ್’ಘಾಟ್ನಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಂತ್ಯಸಂಸ್ಕಾರ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ