ಬೋರಿಸ್ ಜಾನ್ಸನ್ ಪ್ರಧಾನಿ ಪಟ್ಟದಿಂದ ಕೆಳಗಿಳಿಯುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ
ಒಂದು ವೇಳೆ ಬೋರಿಸ್ ಜಾನ್ಸನ್ ಅಧಿಕಾರದಿಂದ ಕೆಳಗಿಳಿದರೆ ಮುಂದಿನ ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಮೂಲದ
ಇನ್ಫೊಸೀಯಸ್ ನ ನಾರಾಯಣ ಮೂತಿ೯ ಅಳಿಯ ರಿಷಿ ಸುನಾಕ್ ಪಟ್ಟವನ್ನು ಅಲಂಕರಿಸುವ ಸಾಧ್ಯತೆಯಿದೆ.
ಕೋವಿಡ್ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಮದ್ಯದ ಪಾರ್ಟಿ ಮಾಡಿರುವ ವಿವಾದದಲ್ಲಿ ಸಿಲುಕಿರುವ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಸ್ವಪಕ್ಷದಲ್ಲೇ ರಾಜಿನಾಮೆ ನೀಡುವಂತೆ ಒತ್ತಡ ನಿರ್ಮಾಣವಾಗಿದೆ.
2020ರ ಮೇ ತಿಂಗಳಿನಲ್ಲಿ ಇಂತಹ ವಿವಾದಕ್ಕೆ ಸಿಲುಕಿದ್ದ ಪ್ರಧಾನಿ ಬಳಿಕವೂ 2021ರಲ್ಲಿ ಬ್ರಿಟನ್ ರಾಜಕುಮಾರ ಫಿಲಿಪ್ (ರಾಣಿ ಎಲಿಜಬೆತ್‍ರ ಪತಿ)ರ ಅಂತ್ಯಕ್ರಿಯೆಗೂ ಮುನ್ನ ಮದ್ಯದ ಪಾರ್ಟಿ ಮಾಡಿರುವುದಾಗಿ ಆರೋಪ ಈಗ ಕೇಳಿ ಬಂದಿದೆ.
ಬೋರಿಸ್ ಜಾನ್ಸನ್‌ಗೆ ಅಧಿಕಾರದಿಂದ ಕೆಳಗೆ ಇಳಿಯುವಂತೆ ಹಲವು ಕಡೆಗಳಿಂದ ಒತ್ತಡ ಇರುವಾಗ ಭಾರತೀಯ ರಿಷಿ ಸುನಾಕ್ ಮುಂದಿನ ಪ್ರಧಾನಿಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಮುಂದಿನ ಪ್ರಧಾನಿಯಾಗುವವರ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿ ರಿಷಿಯವರ ಹೆಸರು ಇದೆ ಎಂದು ವರದಿಯಾಗಿದೆ.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು
ಯೋಗ ಗುರು ಶರತ್ ಜೋಯಿಸ್ ಹೃದಯಾಘಾತದಿಂದ ನಿಧನ
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿ