December 23, 2024

Newsnap Kannada

The World at your finger tips!

rishb shetty

ಭತ್ತದ ಗದ್ದೆಯಲ್ಲಿ ಕಳೆ ತೆಗೆದ ನಟ ರಿಷಬ್ ಶೆಟ್ಟಿ

Spread the love

ಉಡುಪಿ ಜಿಲ್ಲೆಯ ಮೂಡುತೋನ್ಸೆಯಲ್ಲಿ ನಡೆದ ಹಡಿಲು ಭೂಮಿ ಬೇಸಾಯ ಆಂದೋಲನದಲ್ಲಿ ಪಾಲ್ಗೊಂಡಿದ್ದ ನಟ, ನಿದೇರ್ಶಕ ರಿಷಬ್ ಶೆಟ್ಟಿ, ಭತ್ತದ ಗದ್ದೆಯಲ್ಲಿ ಕಳೆಗಳನ್ನು ತೆಗೆದರು.

ಕೇದಾರೋತ್ಥಾನ ಟ್ರಸ್ಟ್ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ 1500 ಎಕರೆ ಹಡಿಲು ಭೂಮಿ ಬೇಸಾಯ ಮಾಡಲಾಗಿದೆ. ಈ ಗದ್ದೆಗಳಲ್ಲಿ ಪೈರಿನ ಮಧ್ಯೆ ಕಳೆ ಗಿಡಗಳು ಬೆಳೆದಿದ್ದು, ಇವನ್ನು ತೆಗೆಯುವ ಕೆಲಸದಲ್ಲಿ ಉಡುಪಿ ಜಿಲ್ಲಾ ಯುವ ಮೋರ್ಚಾದ ಪದಾಧಿಕಾರಿಗಳು ಸೇವಾ ಮನೋಭಾವನೆಯಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಶಾಸಕ ಕೆ. ರಘುಪತಿ ಭಟ್ ನೇತೃತ್ವ ವಹಿಸಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ರಿಶಬ್‌ಶೆಟ್ಟಿ ಲವಲವಿಕೆಯಿಂದ ಗದ್ದೆಯಲ್ಲಿ ಕಳೆ ಕಿತ್ತರು. ಉಡುಪಿ ಶಾಸಕರು ಮಾದರಿ ಕೆಲಸ ಮಾಡುತ್ತಿದ್ದಾರೆ. ಬೇಸಾಯದಿಂದ ಜನರು ವಿಮುಖರಾಗುತ್ತಿರುವ ಇಂತಹ ಸಂದರ್ಭದಲ್ಲಿ ಈ ರೀತಿಯ ಅಭಿಯಾನಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಯುವಕರು, ಗ್ರಾಮಸ್ಥರು ತಮ್ಮ ನೆಚ್ಚಿನ ನಟನೊಂದಿಗೆ ಫೋಟೊ ತೆಗೆಸಿಕೊಂಡರು.

Copyright © All rights reserved Newsnap | Newsever by AF themes.
error: Content is protected !!