ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ವೃಂದಗಳ ತಜ್ಞ ವೈದ್ಯರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹಾಗೂ ದಂತ ಆರೋಗ್ಯಾಧಿಕಾರಿಗಳಿಗೆ ವಿಶೇಷ ಭತ್ಯೆಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.
ಕೋವಿಡ್ ಸಂದರ್ಭದಲ್ಲಿ ವೈದ್ಯರು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಮತ್ತು ಭವಿಷ್ಯದಲ್ಲಿ ಯುವ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಮಾಡಲು ಪ್ರೋತ್ಸಾಹಿಸಲು ತಜ್ಞ ವೈದ್ಯರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ & ದಂತ ಆರೋಗ್ಯಾಧಿಕಾರಿಗಳಿಗೆ 2020 ರ ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ ವಿಶೇಷ ಭತ್ಯೆಗಳನ್ನು ಪರಿಷ್ಕರಿಸಲಾಗಿದೆ.
ಯಾರಿಗೆ ಎಷ್ಟು ಪರಿಷ್ಕರಣೆ?
- 2015 ರಲ್ಲಿ ವಿಶೇಷ ಭತ್ಯೆಗಳನ್ನು ಪರಿಷ್ಕರಿಸಲಾಗಿತ್ತು. 0-6 ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಎಸ್/ಬಿಡಿಎಸ್ ವಿದ್ಯಾರ್ಹತೆ ಇರುವವರಿಗೆ ಮಾಸಿಕ 21,000 ರೂ.ನಿಂದ 30,500 ರೂ., ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಇರುವವರಿಗೆ ಮಾಸಿಕ 42,600 ರೂ.ನಿಂದ 55,500 ರೂ., ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಇರುವವರಿಗೆ ಮಾಸಿಕ 50,800 ರೂ.ನಿಂದ 64,500 ರೂ.ಗೆ ಹೆಚ್ಚಿಸಲಾಗಿದೆ.
- 6-13 ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್/ಬಿಡಿಎಸ್ ಅರ್ಹತೆ ಹೊಂದಿದವರಿಗೆ ಮಾಸಿಕ 22,000 ರೂ.ನಿಂದ 37,500 ರೂ., ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಇರುವವರಿಗೆ ಮಾಸಿಕ 43,700 ರೂ.ನಿಂದ 64,500 ರೂ., ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಇರುವವರಿಗೆ ಮಾಸಿಕ 52,100 ರೂ.ನಿಂದ 73,500 ರೂ.ಗೆ ಹೆಚ್ಚಿಸಲಾಗಿದೆ.
- 13-20 ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್/ಬಿಡಿಎಸ್ ಅರ್ಹತೆ ಹೊಂದಿದವರಿಗೆ ಮಾಸಿಕ 23,000 ರೂ.ನಿಂದ 44,500 ರೂ., ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಇರುವವರಿಗೆ ಮಾಸಿಕ 44,800 ರೂ.ನಿಂದ 73,500 ರೂ., ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಇರುವವರಿಗೆ ಮಾಸಿಕ 58,400 ರೂ.ನಿಂದ 83,500 ರೂ.ಗೆ ಹೆಚ್ಚಿಸಲಾಗಿದೆ.
- 20-25 ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್/ಬಿಡಿಎಸ್ ಅರ್ಹತೆ ಹೊಂದಿದವರಿಗೆ ಮಾಸಿಕ 23,000 ರೂ.ನಿಂದ 52,500 ರೂ., ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಇರುವವರಿಗೆ ಮಾಸಿಕ 44,800 ರೂ.ನಿಂದ 83,500 ರೂ., ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಇರುವವರಿಗೆ ಮಾಸಿಕ 58,400 ರೂ.ನಿಂದ 93,500 ರೂ.ಗೆ ಹೆಚ್ಚಿಸಲಾಗಿದೆ.
- 25 ವರ್ಷಕ್ಕಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್/ಬಿಡಿಎಸ್ ಅರ್ಹತೆ ಹೊಂದಿದವರಿಗೆ ಮಾಸಿಕ 23,000 ರೂ.ನಿಂದ 60,500 ರೂ., ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಇರುವವರಿಗೆ ಮಾಸಿಕ 44,800 ರೂ.ನಿಂದ 93,500 ರೂ., ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಇರುವವರಿಗೆ ಮಾಸಿಕ 58,400 ರೂ.ನಿಂದ 1,03,500 ರೂ.ಗೆ ಹೆಚ್ಚಿಸಲಾಗಿದೆ.
ಕರ್ನಾಟಕ ವೈದ್ಯಾಧಿಕಾರಿಗಳ ಸಂಘವು ಸಿಜಿಎಚ್ ಸಿ ಮಾದರಿಯಲ್ಲಿ ಭತ್ಯೆ ಪರಿಷ್ಕರಿಸುವಂತೆ ಕೋರಿತ್ತು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಸಭೆ ನಡೆಸಿ ಈ ಕುರಿತು ಚರ್ಚೆ ನಡೆಸಿದ್ದರು.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ