February 22, 2026

Newsnap Kannada

The World at your finger tips!

serai

ಬಿಜೆಪಿಯ ನಾಲ್ವರು ಸಚಿವರಿಂದ ರೆಸಾರ್ಟ್‌ ರಾಜಕೀಯ

Spread the love

ಖಾತೆ ಕ್ಯಾತೆ ಮುಗಿಯುತ್ತಿದ್ದಂತೆ ಈಗ ಬಿಜೆಪಿಗೆ ಮತ್ತೊಂದು ಆಘಾತ ಸಂಗತಿ ಎದುರಾಗಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತೊಂದು ತಲೆ ಬಿಸಿ ಆರಂಭವಾಗಿದೆ.

ಖಾತೆ ಅಸಮಾಧಾನದ ಮಧ್ಯೆ ಇದೀಗ ರೆಸಾರ್ಟ್ ರಾಜಕೀಯ ಆರಂಭವಾಗಿದೆ. ಈ ವಿಚಾರ ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ.

ಚಿಕ್ಕಮಗಳೂರಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಗೌಪ್ಯಸಭೆ ನಡೆಯುತ್ತಿದೆ. ನಿನ್ನೆ ರಾತ್ರಿಯೇ ನಾಲ್ವರು ಸಚಿವರು ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ ಮೂಲಗಳಿಂದ ಗೊತ್ತಾಗಿದೆ.

ಚಿಕ್ಕಮಗಳೂರು ಹೊರವಲಯದ ಸರಾಯ್ ರೆಸಾರ್ಟ್ ನಲ್ಲಿ ಅತೃಪ್ತರ ಸಭೆ ನಡೆಯುತ್ತಿದೆ. ಸಿ.ಪಿ ಯೋಗೇಶ್ವರ್, ಗೋಪಾಲಯ್ಯ, ಶಾಸಕ ಎಂಪಿ ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಿರುವ ಗೊತ್ತಾಗಿದೆ

ಸದ್ಯ ಈ ಗೌಪ್ಯ ಸಭೆಯಿಂದಾಗಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದ ಸಚಿವ ರಮೇಶ್ ಜಾರಕಿಹೊಳಿಯಿಂದಲೇ ಇದೀಗ ಸರ್ಕಾರವನ್ನು ಉರುಳಿಸುವ ಪ್ರಯತ್ನ ನಡೆದಿದೆ. ಈ ಗೌಪ್ಯ ಸಭೆ ಎಷ್ಟರ ಮಟ್ಟಿಗೆ ಸಂಕಷ್ಟ ತರುತ್ತದೆ ಎನ್ನುವುದನ್ನು ಕಾದು ನೋಡಬೇಕು.

error: Content is protected !!