ಹಿಜಬ್, ಹಲಾಲ್ ಕಟ್, ಜಟ್ಕಾ ಕಟ್, ಆಜಾನ್, ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ಆಯ್ತು ಇದೀಗ ಏರಿಯಾ ರಸ್ತೆಗಳು ವೃತ್ತಗಳಿಗೆ ಇಟ್ಟಿರುವ ಹೆಸರಿಗೂ ಬ್ರೇಕ್ ಹಾಕವಂತೆ ಒತ್ತಡ ಹೇರಲು ಹಿಂದೂ ಸಂಘಟನೆಗಳು ಮುಂದಾಗಿವೆ.
ಬೆಂಗಳೂರಿಗೆ ಯಾವುದೇ ಕೊಡುಗೆ ನೀಡದ ವ್ಯಕ್ತಿಗಳ ಹೆಸರನ್ನು ಬದಲಾಯಿಸುವಂತೆ ಆಂದೋಲನ ಶುರುವಾಗಿದೆ.
ಬೆಂಗಳೂರಿನ ರಸ್ತೆಗಳು, ಏರಿಯಾ ಹೆಸರು ಬದಲಾಯಿಸುವಂತೆ ಬಿಜೆಪಿ ಮುಖಂಡರು ಅಭಿಯಾನ
ಹಿಂದುಯೇತರ ರಸ್ತೆಗಳು, ಏರಿಯಾಗಳ ಹೆಸರು ಬದಲಾಯಿಸುವಂತೆ ಬಿಬಿಎಂಪಿ ಅಯುಕ್ತರಿಗೆ ಪತ್ರ ಬರೆಯಲಾಗಿದೆ.
ನಗರದಲ್ಲಿ ಇರುವ ವಿಕ್ಟೋರಿಯ ರಸ್ತೆ, ಟಿಪ್ಪು ಸುಲ್ತಾನ್ ರಸ್ತೆ, ಟ್ಯಾನಿ ರಸ್ತೆ ಸೇರಿದಂತೆ ಸುಮಾರು 300ರಕ್ಕೂ ಹೆಚ್ಚು ರಸ್ತೆಗಳು ಹಾಗೂ ಬಿಸ್ಮಿಲ್ ನಗರ, ಇಲಿಯಾಸ್ ನಗರ, ಸುಲ್ತಾನ್ ಪಾಳ್ಯ, ಪ್ರೇಜರ್ ಟೌನ್, ಕಾಕ್ಸ್ ಟೌನ ಸೇರಿದಂತೆ ನೂರಾರು ಏರಿಯಾಗಳ ಹೆಸರು ಮರುನಾಮಕಾರಣಕ್ಕೆ ಅಭಿಯಾನ ಆರಂಭವಾಗಿದೆ.
ಬೆಂಗಳೂರಿನ ಟಿಪ್ಪುಸುಲ್ತಾನ್ ರಸ್ತೆಯನ್ನೂ ಮರು ನಾಮಕಾರಣ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಬೆಂಗಳೂರಿಗೆ ಹೆಸರು ತಂದ ಗಣ್ಯ ವ್ಯಕ್ತಿಗಳ ಹೆಸರು ನಾಮಕರಣಕ್ಕೆ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎನ್.ಆರ್. ರಮೇಶ್ ಅವರು ಆಯುಕ್ತರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಮುಖ್ಯ ರಸ್ತೆಗಳಲ್ಲಿ ಮುಸ್ಲಿಂ ಹೆಸರು ಬದಲಾವಣೆಗೆ ಸಿದ್ಧತೆ ನಡೆಸಲಾಗುತ್ತಿದೆ. 198 ವಾರ್ಡ್‍ಗಳಲ್ಲಿನ ಮುಸ್ಲಿಂ ರಸ್ತೆಗಳ ಹೆಸರು ಸಂಗ್ರಹ ಮಾಡಲಾಗಿದೆ. ಹಿಂದೂ ಸಂಘಟನೆಗಳು ಆರ್ ಟಿ ಐ ಮೂಲಕ ಮಾಹಿತಿ ಕಲೆಹಾಕಿ, 100ಕ್ಕೂ ಹೆಚ್ಚು ರಸ್ತೆಗಳಿಗೆ ಮುಸ್ಲಿಂ ಸಮಾಜ ಸೇವಕರ ಹೆಸರಿದೆ.
ಮುಸ್ಲಿಮರ ಬದಲಿಗೆ ಹಿಂದೂ ಸಾಧಕರ ಹೆಸರಿಡಲು ಒತ್ತಾಯ ಮಾಡಲಾಗುತ್ತಿದ್ದು, ಹೊಸ ಅಭಿಯಾನಕ್ಕೆ ಪಾಲಿಕೆ ಸೊಪ್ಪು ಹಾಕುತ್ತಾ ಸರ್ಕಾರ ಎಂಬುದನ್ನು ಕಾದುನೋಡಬೇಕಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ