ಮೈಸೂರಿನಲ್ಲಿ ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಯೋಗ ಪ್ರದರ್ಶನ ಮಾಡಲಿದ್ದಾರೆ. ಮಾತ್ರವಲ್ಲ, ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಆಗಮಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಯೋಗದ ಮಹತ್ವದ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಎಲ್ಲರೂ ಯೋಗಾಭ್ಯಾಸಲ್ಲಿ ತೊಡಗಬೇಕು ಎಂಬ ಮನವಿ ಮಾಡಿಕೊಂಡಿದ್ದಾರೆ. ಈ ಸಂದೇಶ ಎಲ್ಲರನ್ನೂ ತಲುಪಬೇಕು ಎಂಬ ನಿಟ್ಟಿನಲ್ಲಿ ಅವರು ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ – ಮಂಡ್ಯ ಜಿಲ್ಲೆಯಲ್ಲಿ ನಾಳೆಯ ಚುನಾವಣೆಗೆ ಸಕಲ ಸಿದ್ಧತೆ
ಜಗತ್ತು ಅಂತರರಾಷ್ಟ್ರೀಯ ಯೋಗದಿನವನ್ನು ಆಚರಿಸಲಿದೆ. ಯೋಗ ದಿನವನ್ನು ನೀವೆಲ್ಲರೂ ಆಚರಿಸುವಂತೆ ಮತ್ತು ಯೋಗಾಭ್ಯಾಸವನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಿ ಎಂದು ನಾನು ಆಗ್ರಹಿಸುವೆ. ಅದರಿಂದ ಆಗುವ ಲಾಭಗಳು ಹಲವಾರು.. ಎಂದು ಯೋಗ ಇನ್ ಅವರ್ ಡೈಲಿ ಲೈಪ್ ಎಂಬ ವಿಡಿಯೋ ಮೋದಿ ಹಂಚಿಕೊಂಡಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

ಮಂಡ್ಯ ಜಿಲ್ಲೆಯಲ್ಲಿ ನಾಳೆಯ ಚುನಾವಣೆಗೆ ಸಕಲ ಸಿದ್ಧತೆ
ಕರ್ನಾಟಕ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ನಾಳೆ ( ಜೂನ್ 13 ರಂದು) ಮತದಾನ ನಡೆಯಲಿರುವ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಜಿಲ್ಲಾ ಆಡಳಿತವು ಸಕಲ ಸಿದ್ದತೆ ಮಾಡಿಕೊಂಡಿದೆ
ಮಂಡ್ಯ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ :
ಕೆ.ಆರ್.ಪೇಟೆ-3326, ನಾಗಮಂಗಲ-2959, ಪಾಂಡವಪುರ-3705, ಮಂಡ್ಯ-15925, ಮದ್ದೂರು- 10360, ಶ್ರೀರಂಗಪಟ್ಟಣ-3307, ಮಳವಳ್ಳಿ-7720 ಒಟ್ಟು 47,302 ಮತದಾರರು ಇದ್ದಾರೆ
ಮತದಾನ ಎಲ್ಲಿ ?
ಕರ್ನಾಟಕ ದಕ್ಷಿಣ ಪದವೀಧರರ ಚುನಾವಣೆಗೆ ಸಂಬಂಧಿಸಿದಂತೆ ಕೆ.ಆರ್.ಪೇಟೆ-03, ( ಮಿನಿ ವಿಧಾನಸೌಧದ 3 ವಿವಿಧ ಕೊಠಡಿ) ನಾಗಮಂಗಲ-03 ಮಿನಿ ವಿಧಾನಸೌಧದ 3 ವಿವಿಧ ಕೊಠಡಿ), ಪಾಂಡವಪುರ-04 ( ಮಿನಿ ವಿಧಾನಸೌಧದ 1 ಕೊಠಡಿ ಹಾಗೂ ತಾಲ್ಲೂಕು ಕಚೇರಿಯ 3 ವಿವಿಧ ಕೊಠಡಿ)
ಮಂಡ್ಯ-15(ಮಂಡ್ಯ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ 7 ವಿವಿಧ ಕೊಠಡಿ ಹಾಗೂ ಮಂಡ್ಯ ವಿಶ್ವವಿದ್ಯಾಲಯ ವಿಜ್ಞಾನ ವಿಭಾಗದ 8 ಕೊಠಡಿ) ಮದ್ದೂರು-10 ( ಮಿನಿ ವಿಧಾನಸೌಧದ 2 ಕೊಠಡಿ, ತಾಲ್ಲೂಕು ಪಂಚಾಯತ್ ಕಚೇರಿಯ 2 ಕೊಠಡಿ, ಸರ್ಕಾರಿ ಮಹಿಳಾ ಕಾಲೇಜಿನ ಹಳೆ ಕಟ್ಟಡದ 3 ಕೊಠಡಿ ಹಾಗೂ ಸರ್ಕಾರಿ ಮಹಿಳಾ ಕಾಲೇಜಿನ ಹೊಸ ಕಟ್ಟಡದ 3 ಕೊಠಡಿ), ಶ್ರೀರಂಗಪಟ್ಟಣ-03(ಮಿನಿ ವಿಧಾನಸೌಧದ 3 ಕೊಠಡಿ),ಮಳವಳ್ಳಿ-07 (ಮಿನಿ ವಿಧಾನಸೌಧದ 2 ಕೊಠಡಿ ಹಾಗೂ ತಾಲ್ಲೂಕು ಪಂಚಾಯತ್ ಕಚೇರಿಯ ವಿವಿಧ 5 ಕೊಠಡಿ) ಒಟ್ಟು 45 ಮತಕೇಂದ್ರಗಳನ್ನು ಸಿದ್ಧತೆ ಮಾಡಲಾಗಿದೆ.
ಪ್ರತಿ ಮತಗಟ್ಟೆಗೆ ಒಬ್ಬರು ಪ್ರಿಸೈಡಿಂಗ್ ಅಧಿಕಾರಿ, ಹಾಗೂ ಮೂವರು ಪೋಲಿಂಗ್ ಅಧಿಕಾರಿಗಳು, ಒಬ್ಬರು ಮೈಕ್ರೋ ಅಬ್ಸರ್‌ವರ್ ನೇಮಕಮಾಡಲಾಗಿದೆ , 45 ಮೈಕ್ರೋ ಅಬ್ಸರ್‌ವರ್, ಪ್ರಿಸೈಡಿಂಗ್ ಅಧಿಕಾರಿಗಳು ಹಾಗೂ ಪೋಲಿಂಗ್ ಅಧಿಕಾರಿಗಳು ಸೇರಿದಂತೆ ಒಟ್ಟು 180 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಪೊಲೀಸ್ ಬಂದೋಬಸ್ತ್ ಗಾಗಿ ಡಿ.ಎಸ್.ಪಿ-4, ಸಿಪಿಐ/ಪಿಐ- 15, ಪಿ.ಎಸ್.ಐ- 20, ಎಎಸ್ಐ- 45, ಸಿ.ಹೆಚ್.ಸಿ/WHC-71, ಸಿ.ಪಿಸಿ/WPC -112 ಸಿಬ್ಬಂದಿ ಹಾಗೂ 9 ಡಿಎಆರ್ ಪಾರ್ಟಿಗಳನ್ನು ನೇಮಕ ಮಾಡಲಾಗಿದೆ.
ಮತದಾನವು ಜೂನ್ 13 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಸರ್ಕಾರಿ ರಜೆ ಯಾರಿಗೆ ?
ದಕ್ಷಿಣ ಪದವೀಧರರ ಕ್ಷೇತ್ರದ ವ್ಯಾಪ್ತಿ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ, ವಿಧಾನ ಪರಿಷತ್ ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಛೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆಗಳಲ್ಲಿ, ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ, ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರ Establishment ಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅಂತಹ ಅರ್ಹ ಮತದಾರರಿಗೆ ಮತ ಚಲಾಯಿಸಲಿರುವ ಮತದಾರರಿಗೆ ಜೂ.13 ರಂದು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದೆ.
ಯೋಗಾಭ್ಯಾಸ ಯೋಗಾಭ್ಯಾಸ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು