Main News

ಗಣರಾಜ್ಯೋತ್ಸವದಂದು ಅಯೋಧ್ಯೆ ಯಲ್ಲಿ ಮಸೀದಿ ನಿರ್ಮಾಣಕ್ಕೂ ಚಾಲನೆ

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲ್ಯಾನ್ಯಾಸ ಮಾಡಲಾಗಿದೆ. ಈಗ 2021ರ ಜನವರಿ 26 ಕ್ಕೆ ಅಯೋಧ್ಯೆ ಯಲ್ಲಿ ಮಸೀದಿಯ ನಿರ್ಮಾಣ ಕಾರ್ಯ ಆರಂಭವಾಗಲಿದೆ.

ಡಿಸೆಂಬರ್ 19ರಂದು ಇಂಡೋ-ಇಸ್ಲಾಮಿಕ್ ಕಲ್ಚರ್ ಫೌಂಡೇಶನ್ (ಐಐಸಿಎಫ್) ಮಸೀದಿ ಮತ್ತು ಆಸ್ಪತ್ರೆಯ ನೀಲಿ ನಕ್ಷೆಯನ್ನು ಬಿಡುಗಡೆಗೊಳಿಸಿದೆ. ನಿರ್ಮಾಣ ಕಾರ್ಯ ಆರಂಭದ ದಿನಾಂಕವನ್ನು ಈಗ ಪ್ರಕಟಿಸಿದೆ.

ಅಲಿಗಢ ಮುಸ್ಲಿಂ ಯುನಿವರ್ಸಿಟಿಯ ವಾಸ್ತು ವಿಭಾಗದದ ಡೀನ್ ಎಂ ಎಸ್ ಅಖ್ತರ್ ಅವರು ಮಸೀದಿಯನ್ನು ವಿನ್ಯಾಸಗೊಳಿಸಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ಅನ್ವಯ ಉತ್ತರ ಪ್ರದೇಶ ಸರ್ಕಾರ ಮಸೀದಿ ನಿರ್ಮಾಣಕ್ಕೆ ಧನ್ನಿಪುರದಲ್ಲಿ 5 ಎಕರೆ ಜಮೀನು ನೀಡಿದೆ. ಇದೀಗ ಇದೇ ಸ್ಥಳದಲ್ಲಿ ಮಸೀದಿ ಮತ್ತು ಆಸ್ಪತ್ರೆ ನಿರ್ಮಾಣವಾಗಲಿದೆ. ಐಐಸಿಎಫ್ ಪ್ರಧಾನ ಕಾರ್ಯದರ್ಶಿ ಅತ್ಹರ್ ಹುಸೈನ್ ಗಣರಾಜ್ಯೋತ್ಸವ ದಿನದಂದು ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ.

ಜನವರಿ 26ರಂದೇ ದೇಶದ ಸಂವಿಧಾನ ರಚನೆ ಆದ ದಿನ. ಇದಕ್ಕಿಂತ ಒಳ್ಳೆಯ ದಿನ ನಮ್ಮ ಮುಂದಿಲ್ಲ ಎಂದು ಹೇಳಿದ್ದಾರೆ.

ಮಸೀದಿ ಹೇಗಿರುತ್ತೆ? :
ಅಯೋಧ್ಯೆಯ ಧನ್ನಿಪುರದಲ್ಲಿ ಮಸೀದಿಗೆ ಗುಂಬಜ ಇರಲ್ಲ. ಬದಲಾಗಿ ಮಸೀದಿ ಗೋಲಾಕಾರದ ವಿನ್ಯಾಸದಲ್ಲಿ ಭೂಮಿಯಂತೆ ಗಾಜಿನಿಂದ ಮಾಡಲ್ಪಟ್ಟ ಗೋಲರೂಪದಲ್ಲಿ ಮಿಂಚಲಿದೆ.

ಮಸೀದಿಗೆ ಯಾವುದೇ ರಾಜನ ಹೆಸರನ್ನು ಇಡುವುದಿಲ್ಲ. ಕ್ಯಾಂಪಸ್‍ನಲ್ಲಿ ಮ್ಯೂಸಿಯಂ, ಗೃಂಥಾಲಯ ಹಾಗೇ ಒಂದು ಸಮುದಾಯದಯ ಪಾಕ ಶಾಲೆ ಸಹ ಇರಲಿದೆ.

300 ಬೆಡ್ ಆಸ್ಪತ್ರೆಗೂ ಅವಕಾಶ:

200 ರಿಂದ 300 ಬೆಡ್ ಸಾಮರ್ಥ್ಯದ ಆಸ್ಪತ್ರೆ ಮಸೀದಿ ಹಿಂಭಾಗದಲ್ಲಿ ಇರಲಿದೆ. ಎರಡು ಅಂತಸ್ತಿನ ಮಸೀದಿ ತಲೆ ಎತ್ತಲಿದೆ. ಇಲ್ಲಿ ಏಕಕಾಲದಲ್ಲಿ 2 ಸಾವಿರ ಮಂದಿ ನಮಾಝ್ ಮಾಡಬಹುದು. ಇದರಲ್ಲಿ ಮಹಿಳಯರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ. ಆಸ್ಪತ್ರೆ ಒಟ್ಟು ನಾಲ್ಕು ಫ್ಲೋರ್ ಹೊಂದಿರುತ್ತದೆ.. ಆಸ್ಪತ್ರೆ ನಿರ್ಮಾಣದ ಬಳಿಕ ಚಾರಿಟಿ ಮಾಡೆಲ್ ನಲ್ಲಿ ಕಾರ್ಯನಿರ್ವಹಿಸಲಿದೆ.

Team Newsnap
Leave a Comment
Share
Published by
Team Newsnap

Recent Posts

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024