November 6, 2024

Newsnap Kannada

The World at your finger tips!

rbi Governor

ರೆಪೋ ದರ ಯಥಾಸ್ಥಿತಿ

Spread the love

ಮುಂಬೈ: ಆರ್‍ಬಿಐ ರೆಪೋ ದರವನ್ನು ಸತತ ನಾಲ್ಕನೇ ಬಾರಿಯೂ ಶೇಕಡಾ 6.5ರಷ್ಟರಲ್ಲಿಯೇ ಯಥಾಸ್ಥಿತಿ ಉಳಿಸಿಕೊಂಡಿದೆ. ಕೇಂದ್ರ ಬ್ಯಾಂಕ್‍ನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್‍ಬಿಐ ಗವರ್ನರ್ ಶಕ್ತಿಕಾಂತ ದಾಸ್  ಶುಕ್ರವಾರ ತಿಳಿಸಿದ್ದಾರೆ.

ಇದರಿಂದ ಬ್ಯಾಂಕುಗಳಲ್ಲಿ ಗ್ರಾಹಕರ ಸಾಲದ ಬಡ್ಡಿದರ ಬದಲಾಗದೆ ಉಳಿಯಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ಹಣದುಬ್ಬರ ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ ಒಟ್ಟಾರೆ ದೃಷ್ಟಿಕೋನವು ಅನಿಶ್ಚಿತತೆಗಳಿಂದ ಮಸುಕಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಶೇ. 5.4 ಮತ್ತು ಮುಂದಿನ ಹಣಕಾಸು ವರ್ಷದಲ್ಲಿ 5.2ಕ್ಕೆ ಇಳಿಯುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಇದನ್ನು ಓದಿ –ಏರ್ ಶೋಗೆ ಅಸ್ತು

ಆದರೂ ಪ್ರಸಕ್ತ ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕದಲ್ಲಿ ಆಹಾರ ಹಣದುಬ್ಬರ ಇಳಿಕೆಯನ್ನು ಕಾಣುವುದಿಲ್ಲ ಎಂದು ಅಂದಾಜಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!