December 23, 2024

Newsnap Kannada

The World at your finger tips!

WhatsApp Image 2022 06 08 at 12.33.55 PM

Repo Rate Increases - Home and Personal Loan Interest Rate Up to 4.90%, EMI Is Expensive

ರೆಪೋ ದರ ಹೆಚ್ಚಳ- ಗೃಹ , ವೈಯಕ್ತಿಕ ಸಾಲದ ಬಡ್ಡಿ ದರ ಶೇ.4.90ಕ್ಕೆ ಏರಿಕೆ, EMI ಕೂಡ ದುಬಾರಿ

Spread the love

RBI ಗ್ರಾಹಕರಿಗೆ ಮತ್ತೆ ಬಿಗ್ ಶಾಕ್ ನೀಡಿದೆ. ತನ್ನ ಬೆಂಚ್‌ಮಾರ್ಕ್ ಪಾಲಿಸಿಯ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಗೆ (ಶೇ.0.5%) ಹೆಚ್ಚಿಸುವ ಮೂಲಕ ಈ ಮೂಲಕ ರೆಪೋ ದರ ಶೇ.4.90ಕ್ಕೆ ಬುಧವಾರ ಏರಿಕೆ ಮಾಡಿದೆ

ಇದನ್ನು ಓದಿ -ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದ ಪೋಷಕರು – ಮರ್ಯಾದ ಹತ್ಯೆ

ಆರ್​​ಬಿಐ ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ರೇಪೋ ದರ ಹೆಚ್ಚಿಸಿದಂತಾಗಿದೆ.

ಆರ್​ಬಿಐ ಕಳೆದ ಮೇ ತಿಂಗಳಲ್ಲಿ 40 ಬೇಸಿಸ್ ಪಾಯಿಂಟ್ಸ್ ಹೆಚ್ಚಿಸಿತ್ತು. ಇದೀಗ ಮತ್ತೆ 50 ಬೇಸಿಸ್ ಪಾಯಿಂಟ್ಸ್ ಹೆಚ್ಚಿಸಲಾಗಿದೆ

ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗವರ್ನರ್ ಶಕ್ತಿಕಾಂತ್ ದಾಸ್ ದೇಶದಲ್ಲಿ ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿದೆ ಇದರ ಪರಿಶೀಲನೆ ಅಗತ್ಯವಾಗಿದೆ. ಆರ್ಥಿಕತೆ ಸಂಕಷ್ಟದಲ್ಲಿ ಸಾಲದ ಹರಿವನ್ನು ನಿಯಂತ್ರಿಸುವ ಉದ್ದೇಶದಿಂದ ಆರ್​ಬಿಐ ಈ ಕ್ರಮಕ್ಕೆ ಮುಂದಾಗಿದೆ ಎಂದರು

ಕೇಂದ್ರ ಬ್ಯಾಂಕ್​ನ ಈ ನಿರ್ಧಾರದಿಂದ ಬ್ಯಾಂಕ್‌ಗಳಿಂದ ಗ್ರಾಹಕರು ಸಾಲ ಪಡೆಯೋದು ಮತ್ತಷ್ಟು ದುಬಾರಿ ಆಗಲಿದೆ.

ರೆಪೋ ಅಂದ್ರೆ ಆರ್​ಬಿಐ ಇತರೆ ಬ್ಯಾಂಕ್​ಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ದರ. ರೆಪೋ ರೇಟ್ ಹೆಚ್ಚಳವಾದ್ರೆ ಬ್ಯಾಂಕ್​ಗಳಲ್ಲಿ ಬಡ್ಡಿ ಕೂಡ ಹೆಚ್ಚಳವಾಗುತ್ತದೆ. ಬ್ಯಾಂಕ್​ಗಳು ನೀಡುವ ಸಾಲದ ಮೇಲಿನ ಬಡ್ಡಿ ಹೆಚ್ಚಾಗುತ್ತೆ. ಗೃಹ ಸಾಲ, ವಾಹನ ಸಾಲ ಮುಂತಾದವುಗಳ ಬಡ್ಡಿ ಸಹಜವಾಗಿಯೇ ಹೆಚ್ಚಳವಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇಕಡಾ 6.7ಕ್ಕೆ ಏರಿಕೆಯಾಗುವ ಮುನ್ಸೂಚನೆ ಆರ್​ಬಿಐಗೆ ಸಿಕ್ಕಿದೆ.

ಈ ಹಿಂದೆ ಶೇಕಡಾ 5.7 ರಷ್ಟು ಹಣದುಬ್ಬರ ಇರಲಿದೆ ಎಂದು RBI ಅಂದಾಜಿಸಿತ್ತು. ಇದೀಗ ಹಣದುಬ್ಬರ ಮತ್ತಷ್ಟು ಏರಿಕೆಯಾಗುವ ಮನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.
ವಿತ್ತಿಯ ನೀತಿಯನ್ನು ಪರಿಗಣಿಸುವಾಗ RBI ಚಿಲ್ಲರೆ ಹಣದುಬ್ಬರ ದರವನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳುತ್ತದೆ. ಈ ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ. 7.79 ರಷ್ಟಿತ್ತು. ಇದು ಕಳೆದ 8 ವರ್ಷಗಳಲ್ಲಿಯೇ ಅತ್ಯಧಿಕ ಹಣದುಬ್ಬರವನ್ನ ಎದುರಿಸಿದೆ. ಹೀಗಾಗಿ ಚಿಲ್ಲರೆ ಹಣದುಬ್ಬರವನ್ನು ಶೇ. 2 ರಿಂದ 6% ರ ವ್ಯಾಪ್ತಿಯ ಅಡಿಯಲ್ಲಿ ಇರಿಸುವ ಜವಾಬ್ದಾರಿ RBI ಹೆಗಲಿಗೆ ಬಿದ್ದಿದೆ.

Copyright © All rights reserved Newsnap | Newsever by AF themes.
error: Content is protected !!