ರಾಜಭವನಕ್ಕೆ ಖಾತೆ ಹಂಚಿಕೆ ಪಟ್ಟಿ ರವಾನೆ – 17 ಸಚಿವರಿಗೆ ಖಾತೆ ಪುನರ್ ಹಂಚಿಕೆ – ಅಸಮಾಧಾನ

Team Newsnap
2 Min Read
  • ಯಾರಿಗೆ ಯಾವ ಖಾತೆ, ಯಾರ ಖಾತೆಗಳು ಬದಲಾಗಿವೆ ಡಿಟೇಲ್ಸ್ ನೋಡಿ

ರಾತ್ರೋರಾತ್ರಿ ಖಾತೆ ಹಂಚಿಕೆ ಪಟ್ಟಿಯನ್ನು ರಾಜಭವನಕ್ಕೆ ರವಾನಿಸಲಾಗಿದೆ.

ಖಾತೆ ಹಂಚಿಕೆ ಹಾಗೂ ಅದಲು ಬದಲು ಮಾಡಿರುವುದು ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಅಸಮಧಾನ ಮತ್ತು ಭಿನ್ನಮತ ಸ್ಫೋಟವಾಗುವ ಸಾಧ್ಯತೆಗಳು ಇವೆ.

ನೂತನ ಸಚಿವರಿಗೆ ಖಾತೆ ಮಾಡದೇ, ಕೆಲವರ ಖಾತೆಗಳನ್ನು ಸಿಎಂ ಅದಲು-ಬದಲು ಮಾಡಿದ್ದಾರೆ. ಅದೇ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡು ಕಳುಹಿಸಿರುವ ಪಟ್ಟಿಗೆ ಇಂದು ರಾಜ್ಯಪಾಲರು ಅಂಕಿತ ಹಾಕಲಿದ್ದಾರೆ.

ಪ್ರಮುಖವಲ್ಲದ ಖಾತೆ ಸಿಕ್ಕ ಸಚಿವರು ನಿರಾಸೆಯುಂಟಾಗುವುದು ಬಹುತೇಕ ಖಚಿತವಾಗಿದೆ. ಸಂಪುಟದ 17 ಸಚಿವರಿಗೆ ಖಾತೆ ಪುನರ್ ಹಂಚಿಕೆ ಮಾಡಲಾಗಿದೆ.

ಯಾರಿಗೆ ಯಾವ ಖಾತೆ, ಯಾರ ಖಾತೆಗಳು ?

  • ಆಹಾರ ಮತ್ತು ನಾಗರಿಕ ಪೂರೈಕೆ
    ಈಗ – ಉಮೇಶ್ ಕತ್ತಿ,
    ಮೊದಲು – ಗೋಪಾಲಯ್ಯ
  • ಗೃಹ, ಕಾನೂನು, ಸಂಸದೀಯ ವ್ಯವಹಾರ
    ಈಗ – ಬಸವರಾಜ ಬೊಮ್ಮಾಯಿ,
    ಮೊದಲು – ಮಾಧುಸ್ವಾಮಿ
  • ವೈದ್ಯಕೀಯ ಶಿಕ್ಷಣ
    ಈಗ – ಮಾಧುಸ್ವಾಮಿ,
    ಮೊದಲು – ಡಾ. ಕೆ . ಸುಧಾಕರ್
  • ಕನ್ನಡ ಮತ್ತು ಸಂಸ್ಕೃತಿ
    ಈಗ – ಮಾಧುಸ್ವಾಮಿ,
    ಮೊದಲು – ಸಿ ಟಿ ರವಿ ರಾಜೀನಾಮೆ ಬಳಿಕ ಸಿಎಂ ಬಳಿಯೇ ಇತ್ತು
  • ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ
    ಈಗ – ಸಿಸಿ ಪಾಟೀಲ್,
    ಮೊದಲು – ಸಿ ಎಂ ಯಡಿಯೂರಪ್ಪ ಬಳಿ ಇತ್ತು.
  • ಅರಣ್ಯ ಖಾತೆ
    ಈಗ – ಅರವಿಂದ ಲಿಂಬಾವಳಿ,
    ಮೊದಲು – ಆನಂದ್ ಸಿಂಗ್
  • ಗಣಿ, ಭೂ ವಿಜ್ಞಾನ
    ಈಗ – ಮುರುಗೇಶ ನಿರಾಣಿ
    ಮೊದಲು – ಸಿಸಿ ಪಾಟೀಲ್
  • ಅಬಕಾರಿ
    ಈಗ – ಎಂಟಿಬಿ ನಾಗರಾಜ್.
    ಮೊದಲು – ನಾಗೇಶ್
  • ಸಣ್ಣ ನೀರಾವರಿ
    ಈಗ – ಸಿಪಿ ಯೋಗೇಶ್ವರ್,
    ಮೊದಲು – ಮಾಧುಸ್ವಾಮಿ
  • ಪ್ರವಾಸೋದ್ಯಮ
    ಈಗ – ಆನಂದಸಿಂಗ್,

    ಮೊದಲು – ಸಿಟಿ ರವಿ ರಾಜೀನಾಮೆ ಬಳಿಕ ಸಿಎಂ ಬಳಿಯೇ ಇತ್ತು
  • ಪೌರಾಡಳಿತ, ರೇಷ್ಮೆ
    ಈಗ – ಆರ್ ಶಂಕರ್,
    ಮೊದಲು – ಕೆ ಸಿ ನಾರಾಯಣಗೌಡ
  • ತೋಟಗಾರಿಕೆ/ ಸಕ್ಕರೆ
    ಈಗ – ಗೋಪಾಲಯ್ಯ,
    ಮೊದಲು – ನಾರಾಯಣಗೌಡ/ ಶಿವರಾಮ್ ಹೆಬ್ಬಾರ್
  • ಯುವಜನ ಸೇವೆ ಮತ್ತು ಕ್ರೀಡೆ, ವಕ್ಫ್, ಹಜ್( ವಕ್ಫ್, ಹಜ್ ಶ್ರೀಮಂತ ಪಾಟೀಲ್ ಬಳಿ ಇತ್ತು)
    ಈಗ – ನಾರಾಯಣಗೌಡ,
    ಮೊದಲು – ಸಿಟಿ ರವಿ ರಾಜೀನಾಮೆ ಬಳಿಕ ಸಿಎಂ ಬಳಿಯೇ ಇತ್ತು
  • ಮೀನುಗಾರಿಕೆ ಮತ್ತು ಬಂದರು
    ಈಗ – ಎಸ್ ಅಂಗಾರ,
    ಮೊದಲು – ಕೋಟಾ ಶ್ರೀನಿವಾಸ್ ಪೂಜಾರಿ
  • ಹಿಂದುಳಿದ ವರ್ಗಗಳ ಕಲ್ಯಾಣ
    ಈಗ – ಕೋಟಾ ಶ್ರೀನಿವಾಸ ಪೂಜಾರಿ (ಮುಜುರಾಯಿ ಕೂಡ ಇರುತ್ತೆ)
    ಮೊದಲು – ಯಡಿಯೂರಪ್ಪ ಬಳಿ ಇತ್ತು.
patti
patti1
Share This Article
Leave a comment