December 27, 2024

Newsnap Kannada

The World at your finger tips!

vanditha

ಪುನೀತ್ ಪುಣ್ಯ ಸ್ಮರಣೆ ದಿನವೇ ಪರೀಕ್ಷೆ: ಭಾರವಾದ ಮನಸ್ಸಿನಿಂದಲೇ ಪರೀಕ್ಷೆಗೆ ತೆರಳಿದ ​ಪುತ್ರಿ ವಂದಿತಾ

Spread the love

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಮ್ಮನ್ನಗಲಿ ಇಂದಿಗೆ 11 ದಿನ ಆಗಿದೆ. ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಸಾಗಿದೆ.

ಈ ವೇಳೆ ಪುನೀತ್ ಎರಡನೇ​ ಪುತ್ರಿ ವಂದಿತಾ ಅಪ್ಪನ ಪುಣ್ಯಸ್ಮರಣೆಯಲ್ಲಿ ಪೂಜೆ ಸಲ್ಲಿಸಿ ಪರೀಕ್ಷೆಗೆ ಹಾಜರಾಗಿದ್ದಾರೆ.

10 (ICSE) ತರಗತಿಯಲ್ಲಿ ಓದುತ್ತಿರುವ ವಂದಿತಾಗೆ ಇಂದು ಪರೀಕ್ಷೆ ಇದ್ದು ಪುನೀತ್​ ಪುಣ್ಯಕಾರ್ಯ ಮುಗಿಸಿ ಪರೀಕ್ಷೆಗೆ ಭಾರದ ಮನಸ್ಸಿನಿಂದಲೇ ಹೆಜ್ಜೆ ಹಾಕಿದ್ದಾರೆ ವಂದಿತಾ. ಇನ್ನು ನಿನ್ನೆ ಕುಟುಂಬದ ಆಪ್ತಮೂಲಗಳು 11 ರ ಸುಮಾರಿಗೆ ಕಾರ್ಯ ನಡೆಸುವುದಾಗಿ ತಿಳಿಸಿತ್ತು.

ಆದರೆ ಪುತ್ರಿಗೆ ಪರೀಕ್ಷೆ ಇರುವ ಕಾರಣಕುಟುಂಬ ಇಂದು ಬೆಳಿಗ್ಗೆ ಬೇಗನೆ ಕಾರ್ಯವನ್ನು ಮುಗಿಸಿದೆ.

Copyright © All rights reserved Newsnap | Newsever by AF themes.
error: Content is protected !!