January 16, 2025

Newsnap Kannada

The World at your finger tips!

covid

ಕೊರೋನಾ ದಿಂದ ಉಸಿರಾಟದ ಸಮಸ್ಯೆಯಾದರೆ ಮನೆಯಲ್ಲಿ ತಕ್ಷಣಕ್ಕೆ ಮಾಡಬೇಕಾದ ಪರಿಹಾರ

Spread the love

ಕೊರೊನಾ ಸೋಂಕಿತರು ಮನೆಯಲ್ಲಿ ಉಸಿರಾಟದ ಸಮಸ್ಯೆ ಅನುಭವಿಸಿದರೆ ತಕ್ಷಣಕ್ಕೆ ಏನು ಮಾಡಬೇಕು?

ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ.

ಆಮ್ಲಜನಕ ಮಟ್ಟವನ್ನು ಸುಧಾರಿಸಿ ಕೊಳ್ಳಲು ಮಾಡಬೇಕಾದ ಪ್ರೋನಿಂಗ್​ ಬಗ್ಗೆ ವಿಸ್ತೃತ ವರದಿಯನ್ನು ಬಿಡುಗಡೆ ಮಾಡಲಾಗಿದೆ.

1) ಒಂದು ವೇಳೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿ ಉಸಿರಾಟದ ಸಮಸ್ಯೆ ಅನುಭವಿಸಿದ್ದರೆ ಅಂತ ರೋಗಿಗಳಿಗ ಬೋರಲು ಹಾಕಿಕೊಂಡು ಮಲಗಬೇಕು ಎಂದು ಹೇಳಲಾಗಿದೆ.

2) ಬೋರಲು ಹಾಕಿ ಮಲಗಿದರೆ ಆಮ್ಲಜನಕದ ಸಂಚಾರ ಸರಾಗವಾಗುತ್ತದೆ.

3) ಆಮ್ಲಜನಕದ ಮಟ್ಟ 94ಕ್ಕಿಂತ ಕೆಳಗೆ ಇಳಿದರೆ ಆ ರೋಗಿಯು ಹೊಟ್ಟೆ ಹಾಗೂ ಮುಖವನ್ನು ಕೆಳಗೆ ಹಾಕಿ ಮಲಗಬೇಕು.‌

4) ಈ ಪ್ರೋನಿಂಗ್​ ಮಾಡಲು ನಿಮಗೆ ನಾಲ್ಕರಿಂದ ಐದು ದಿಂಬುಗಳ ಅವಶ್ಯಕತೆ ಇದೆ. ಒಂದು ದಿಂಬು ಕುತ್ತಿಗೆ ಕೆಳಗೆ, ಇನ್ನೊಂದು ಎದೆಯ ಕೆಳಗೆ ಇನ್ನೊಂದು ತೊಡೆ ಹಾಗೂ ಉಳಿದ ಎರಡು ದಿಂಬುಗಳನ್ನು ಮೊಣಕಾಲಿನ ಕೆಳಗೆ ಇಡಬೇಕು. ಇದೇ ಸ್ಥಿತಿಯಲ್ಲಿ ಬೋರಲು ಹಾಕಿ 30 ನಿಮಿಷಗಳ ಕಾಲ ಮಲಗಬೇಕು.

covid2

ಈ ಪ್ರೋನಿಂಗ್​​ನ್ನು ಯಾರ್ಯಾರು ಮಾಡಬಾರದು ಅನ್ನೋದನ್ನೂ ಕೂ ಕೇಂದ್ರ ಸಚಿವಾಲಯ ವಿವರವಾಗಿ ಹೇಳಿದೆ

  • ಗರ್ಭಿಣಿ
  • ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದಲ್ಲಿ
  • ಹೃದಯ ಸಂಬಂಧಿ ಗಂಭೀರ ಕಾಯಿಲೆಗಳನ್ನು ಹೊಂದಿರುವವರಿಗೆ
  • ಬೆನ್ನುಮೂಳೆ ಸಮಸ್ಯೆ, ಪೆಲ್ವಿಕ್​ ಮುರಿತ

ಪ್ರೋನಿಂಗ್​ ಮಾಡುವ ವೇಳೆ ಗಮನದಲ್ಲಿಡಬೇಕಾದ ಅಂಶಗಳು :

  • ಆಹಾರ ಸೇವಿಸಿದ ಒಂದು ಗಂಟೆಯಲ್ಲಿ ಮಾಡಬಾರದು
  • ಸಹಿಸಿಕೊಳ್ಳಬಹುದು ಎನಿಸಿದಾಗ ಮಾತ್ರ ಪ್ರೋನಿಂಗ್​ ಮಾಡಬೇಕು
  • ಪ್ರೋನಿಂಗ್​ ಮಾಡುವ ವೇಳೆ ನಿಮ್ಮ ದೇಹ ನ್ಯೂನ್ಯತೆ ಗಮನದಲ್ಲಿರಲಿ
Copyright © All rights reserved Newsnap | Newsever by AF themes.
error: Content is protected !!