ಬೆಳಗಾವಿ : ಕಾಂಗ್ರೆಸ್ ಶಾಸಕರ ಪ್ರತಿ ಕ್ಷೇತ್ರಗಳ ಅಭಿವೃದ್ದಿಗೆ ತಲಾ 25 ಕೋಟಿ ರು ಅನುದಾನವನ್ನು ಮುಂದಿನ ಎರಡು ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಪ್ರಕಟಿಸಿದರು .
ಕೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಖಾಸಗಿ ಹೋಟೆಲ್ ನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಗೆ ಸದನದಲ್ಲಿ ನಡೆದುಕೊಳ್ಳಬೇಕಾದ ರೀತಿ ನೀತಿ ಬಗ್ಗೆ ಪಾಠ ಮಾಡುವ ವೇಳೆ ಸಿಎಂ ಈ ವಿಷಯ ಪ್ರಕಟಿಸಿ ಸದನದಲ್ಲಿ ವಿರೋಧ ಪಕ್ಷಗಳ ಆರೋಪಕ್ಕೆ ಪರಿಣಾಮಕಾರಿಯಾಗಿ ಪ್ರತ್ಯುತ್ತರ ನೀಡುವಂತೆ ಸಲಹೆ ನೀಡಿದರು.
ಬಿಜೆಪಿ, ಜೆಡಿಎಸ್ ಜಂಟಿಯಾಗಿ ದಾಳಿ ಮಾಡುತ್ತಿವೆ. ಕೇವಲ ಸಚಿವರು ಮಾತ್ರವೇ ಸರ್ಕಾರವನ್ನು ಸಮರ್ಥಿಸಿಕೊಂಡರೆ ಸಾಲದು, ಶಾಸಕರೂ ಕೂಡ ಸಚಿವರಿಗೆ ಸಾಥ್ ನೀಡಬೇಕು, ಗಟ್ಟಿಯಾಗಿ ವಿಪಕ್ಷಗಳ ವಿರುದ್ಧ ದನಿ ಎತ್ತಬೇಕು ಅಂತಾ ಸೂಚನೆ ನೀಡಿದ್ದಾರೆ.ಸಚಿವ ಜಮೀರ್ ಅಹಮ್ಮದ್ ಬೆಂಬಲಕ್ಕೆ ನಿಲ್ಲುವಂತೆ ಹಾಗೂ ಒಗ್ಗಟ್ಟು ಕಾಯ್ದುಕೊಳ್ಳುವಂತೆ ಸಿದ್ದರಾಮಯ್ಯ ಶಾಸಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ .
25 ಕೋಟಿ ರೂ. ಅನುದಾನ ಮತ್ತೊಂದು ಕಡೆ ಕಾಂಗ್ರೆಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿರುವ ಸಿಎಂ ಸಿದ್ದಾರಾಮಯ್ಯ ಶಾಸಕರುಗಳಿಗೆ ಭರ್ಜರಿ ಅನುದಾನದ ಗಿಫ್ಟ್ ನೀಡಲು ಮುಂದಾಗಿದ್ದಾರೆ.ಐಸಿಸ್ ಉಗ್ರರ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡ ಸಿಎಂ : ಯತ್ನಾಳ್
ಒಂದೆರಡು ತಿಂಗಳಲ್ಲಿ ಕಾಂಗ್ರೆಸ್ ಶಾಸಕರಿಗೆ ತಲಾ 25 ಕೋಟಿ ಅನುದಾನ ನೀಡೋದಾಗಿ ಸಿಎಲ್‌ಪಿ ಸಭೆಯಲ್ಲಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಅನುದಾನ ಇಲ್ಲ ಅಂತಾ ಯಾರೂ ಅಸಮಾಧಾನ ವ್ಯಕ್ತಪಡಿಸುವುದು ಬೇಡ ಅಂತ ಶಾಸಕರಿಗೆ ಕಿವಿಮಾತು ಸಹ ಹೇಳಿದ್ದಾರೆ. ಇದೇ ವೇಳೆ ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆಯೂ ಸಿದ್ದರಾಮಯ್ಯ ಅಭಿಪ್ರಾಯ ಸಂಗ್ರಹಿಸಿದ್ದಾರೆ.
More Stories
ನಂಬುಗೆಯೇ ಇಂಬು
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.