ಕಲಬುರಗಿಯ IPS ಅಧಿಕಾರಿ ಅರುಣ್ ರಂಗರಾಜನ್ ಮಹಿಳಾ ASI ಅಧಿಕಾರಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಆರೋಪಕ್ಕೆ ಸಂಬಂಧದಿಂದ ದೂರು ದಾಖಲಾಗಿದೆ
ನನ್ನ ಹೆಂಡತಿ ಜೊತೆ IPS ಅಧಿಕಾರಿ ಅರುಣ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆಕೆಯ ಗಂಡ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಐವಾನ್ ಶಾಹಿ ಬಡಾವಣೆ ಲೋಕೋಪಯೋಗಿ ಕ್ವಾಟರ್ಸ್‌ನಲ್ಲಿ ಇಬ್ಬರು ಒಟ್ಟಿಗೆ ಇದ್ದರು. ಇದನ್ನು ಕಂಡ ಗಂಡನಿಗೆ ಶಾಕ್ ಆಗಿತ್ತು. ಬಳಿಕ ಇಬ್ಬರು ಇರುವುದನ್ನು ವಿಡಿಯೋ ಮಾಡಿದ್ದರು. ವಿಡಿಯೋ ಮಾಡಿದ ಹಿನ್ನೆಲೆಯಲ್ಲಿ ಪತಿಯನ್ನು ಹತ್ಯೆ ಮಾಡುವುದಾಗಿ ಪತ್ನಿ ಮತ್ತು ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಏಕಾಂತದಲ್ಲಿದ್ದಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಜಿಲ್ಲೆಯ ISD ವಿಭಾಗದಲ್ಲಿ ಕಳೆದ 3 ವರ್ಷಗಳಿಂದ ಈ ಇಬ್ಬರು ಕೆಲಸ ಮಾಡುತ್ತಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಮಹಿಳಾ ಎಎಸ್ಐ ಜೊತೆ ಐಪಿಎಸ್ ಅರುಣ್ ಅನೈತಿಕ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ.
ಈ ಹಿಂದೆಯು ಇಬ್ಬರು ಏಕಾಂತದಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಪತಿಗೆ ಸಿಕ್ಕಿ ಹಾಕಿಕೊಂಡಿದ್ದರು. ಹೀಗಾಗಿ ಎರಡು , ಮೂರು ಬಾರಿ ಪತ್ನಿಗೆ ಹಾಗೂ ಐಪಿಎಸ್ ಅಧಿಕಾರಿಗೆ ಪತಿ ತಿಳಿ ಹೇಳಿದ್ದರು. ತನ್ನ ಪತ್ನಿ ಹಾಗೂ ಐಪಿಎಸ್ ಅರುಣ್ ರಂಗರಾಜನ್ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 323 , 324 , 498 , 376(2) (b) , 342, 504, 506 (2) 507, 420, 406, 500, 201, 109, 457 ಅಡಿ ಎಫ್ಐಆರ್ ದಾಖಲಿಸಲಾಗಿದೆ.
- ಭೂಕಂಪದ : ಟಿಬೆಟ್-ನೇಪಾಳ ಗಡಿಯಲ್ಲಿ 32 ಮಂದಿ ಸಾವು, 38 ಮಂದಿ ಗಾಯ
- ಭಾರತೀಯ ವಾಯುಪಡೆ: ಏರ್ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ
- ಮದ್ಯ ಕುಡಿಸಿ ಯುವತಿಯ ಮೇಲೆ ಅತ್ಯಾಚಾರ – ಬಿಜೆಪಿ ಮುಖಂಡನ ವಿರುದ್ಧ FIR ದಾಖಲು
- ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
More Stories
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
ಸಂಕ್ರಾಂತಿ ಬಳಿಕ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ