November 16, 2024

Newsnap Kannada

The World at your finger tips!

oil,central govt,price

ಅಡುಗೆ ಎಣ್ಣೆ ಲೀಟರ್‌ಗೆ : 10 ರೂಪಾಯಿಂದ 20 ರೂಪಾಯಿವರೆಗೆ ಇಳಿಕೆ ?

Spread the love

ಅಡುಗೆ ಎಣ್ಣೆ ತಯಾರಿಕೆ ಬೇಕಾಗುವ ಕಚ್ಚಾ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಭಾರೀ ಪ್ರಮಾಣದಲ್ಲಿ ಆಮದು ಸುಂಕ ಹೇರಿದ್ದರ ಪರಿಣಾಮ ಹಾಗೂ ಜಾಗತಿಕ ಅಭಾವದ ಕಾರಣದಿಂದಾಗಿ ಅಡುಗೆ ಎಣ್ಣೆ ದರದಲ್ಲಿ ಭಾರೀ ಏರಿಕೆಯಾಗಿತ್ತು.

ಇದನ್ನು ಓದಿ –ತೆಲಂಗಾಣ ಸರ್ಕಾರಿ ಆಸ್ಪತ್ರೆಯಿಂದ ‘ಪ್ರಸವ ವೇದನೆ’ ತಡೆಗೆ ಲಾಫಿಂಗ್ ಗ್ಯಾಸ್ ಬಳಕೆ

ಲೀಟರ್‌ಗೆ 100 ರೂ. ಇದ್ದ ಎಣ್ಣೆ ದರ ಏಕಾಏಕಿ ಇನ್ನೂರು ರೂಪಾಯಿಯ ಗಡಿ ದಾಟಿತ್ತು. ಇದೀಗ ಕೇಂದ್ರ ಸರ್ಕಾರ ಖಾದ್ಯ ತೈಲ ಎಣ್ಣೆ ಮೇಲಿನ ಸುಂಕ ಇಳಿಕೆ ಮಾಡಿದೆ. ಇದು ಕಂಪನಿಗಳಿಗೆ ವರದಾನವಾಗಿದ್ದು, ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪನಿಗಳು ತೀರ್ಮಾನ ಮಾಡಿವೆ. ಹೀಗಾಗಿ ಲೀಟರ್‌ ಸೂರ್ಯಕಾಂತಿ ಅಡುಗೆ ಎಣ್ಣೆ ಸೇರಿ ಖಾದ್ಯ ತೈಲಗಳ ಲೀಟರ್‌ಗೆ ದರ 10 ರಿಂದ 20 ರೂ. ವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದಿಂದ ಸುಂಕ ರಿಲೀಫ್‌ ಸಿಕ್ಕ ಬೆನ್ನಲ್ಲೇ ಅದಾನಿ ವಿಲ್ಮರ್‌, ಪತಂಜಲಿ, ಮದರ್ ಡೈರಿ ಹಾಗೂ ಇಮಾಮಿ ಆಗ್ರೋಟೆಕ್‌ ಮುಂತಾದ ಪ್ರಮುಖ ಕಂಪನಿಗಗಳು ಸಾಸಿವೆ ಎಣ್ಣೆ, ಸೋಯಾಬೀನ್ ಎಣ್ಣೆ ಮತ್ತು ಸಸ್ಯಜನ್ಯ ಎಣ್ಣೆಗಳ ದರ ಇಳಿಕೆ ಮಾಡುವುದಾಗಿ ಘೋಷಣೆ ಮಾಡಿವೆ. ಇದೇ ಹಾದಿಯನ್ನು ಇತರ ಕಂಪನಿಗಳು ಕೂಡ ಅನುಸರಿಸುವ ಸಾಧ್ಯತೆ ಇದೆ.

ಅದಾನಿ ಒಡೆತದನ ಫಾರ್ಚೂರ್‌ ಬ್ರಾಂಡ್‌ನ ಸಂಸ್ಕರಿತ ಸೂರ್ಯಕಾಂತಿ ಎಣ್ಣೆಯ ದರ ಲೀಟರ್‌ 220 ಇತ್ತು. ಇದೀಗ ಅದನ್ನು 210 ರೂ.ಗೆ ಇಳಿಕೆ ಮಾಡಿದ್ದಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಇದೇ ವೇಳೆ ಫಾರ್ಚೂನ್ ಸೋಯಾಬೀನ್‌ ಹಾಗೂ ಸಾಸಿವೆ ಎಣ್ಣೆಯ ದರ ಕೂಡ ಲೀಟರ್‌ಗೆ 10 ರೂ. ನಷ್ಟು ಇಳಿಕೆ ಮಾಡಲಾಗಿದೆ. ಈವರೆಗೆ ಈ ಎಣ್ಣೆಗಳ ಬೆಲೆ ಲೀಟರ್‌ಗೆ 205 ರೂ. ಇತ್ತು ಇನ್ನು ಮುಂದೆ ಇವುಗಳ ಬೆಲೆ 195 ರೂ. ಆಗಿರಲಿದೆ.

‘ನಮಗೆ ಲಭಿಸಿರುವ ಸುಂಕ ಇಳಿಕೆ ಲಾಭವನ್ನು ನಾವು ಗ್ರಾಹಕರಿಗೆ ವರ್ಗಾವಣೆ ಮಾಡಿದ್ದೇವೆ’ ಎಂದು ಅದಾನಿ ಗ್ರೂಪ್‌ ಹೇಳಿದೆ. ಇನ್ನುಬಾಬಾ ರಾಮ್‌ದೇವ್‌ ಒಡೆತನದ ಪತಂಜಲಿ ಖಾದ್ಯ ತೈಲದ ಬೆಲೆ ಶೇ.7 ರಿಂದ ಶೇ. 10ರಷ್ಟು ಇಳಿಕೆ ಮಾಡಿದೆ. ಮದರ್‌ ಡೈರಿ ಕೂಡ ಎಲ್ಲಾ ರೀತಿಯ ಖಾದ್ಯ ತೈಲದ ಬೆಲೆಗಳನ್ನು ಲೀಟರ್‌ಗೆ 15 ರೂ. ಗಳಷ್ಟು ಇಳಿಕೆ ಮಾಡಿದೆ.

ಇನ್ನು ಹಲವು ಕಂಪನಿಗಳು ಕೂಡ ಬೆಲೆ ಇಳಿಕೆ ಮಾಡುವ ಸಾಧ್ಯತೆ ಇದ್ದು, ಈಗಾಗಲೆ ಬೆಲೆ ಏರಿಕೆಯಿಂದ ಸಾಮಾನ್ಯ ವರ್ಗದ ಮಂದಿಗೆ ರಿಲೀಫ್‌ ಸಿಗಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ, ಉತ್ಪಾದನೆಯಲ್ಲಿ ಕುಂಠಿತ ಹಾಗೂ ಸುಂಕ ಏರಿಕೆ ಸೇರಿ ಹಲವು ಕಾರಣಗಳಿಂದಾಗಿ ಖಾದ್ಯ ತೈಲ ಬೆಲೆ ಗಗನಕ್ಕೆ ಏರಿತ್ತು.

Copyright © All rights reserved Newsnap | Newsever by AF themes.
error: Content is protected !!