ಇಂದು ಕೇಂದ್ರ ಸಂಪುಟ ಪುನರ್ ರಚನೆ : ಕರ್ನಾಟಕದ ನಾಲ್ವರು ಸಂಸದರಿಗೆ‌ ಕೇಂದ್ರ ಮಂತ್ರಿ ಯೋಗ

Team Newsnap
1 Min Read

ಕೇಂದ್ರ ಸಂಪುಟ ಪುನರ್ ರಚನೆಗೆ ಮುಂಚಿತವಾಗಿ ಸಚಿವರಾದ ಡಿವಿ ಸದಾನಂದಗೌಡ, ಡಾ.ಹರ್ಷ ವರ್ಧನ್ , ಸಂತೋಷ್ ಗಂಗ್ವಾರ್, ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಮತ್ತು ದೇಬಶ್ರೀ ಚೌಧರಿ ಅವರುಗಳು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಕರ್ನಾಟಕದಿಂದ ಎ ನಾರಾಯಣ ಸ್ವಾಮಿ, ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಭಗವಂತ್ ಖೂಬಾ , ಜ್ಯೋತಿರಾದಿತ್ಯ ಸಿಂಧಿಯಾ, ಸರ್ಬಾನಂದ ಸೋನೊವಾಲ್, ನಾರಾಯಣ್ ರಾಣೆ ಮತ್ತು ಪಶುಪತಿ ನಾಥ್ ಪರಾಸ್ 43 ಮಂದಿ‌‌ ಹೊಸ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಗೊತ್ತಾಗಿದೆ

ಇದು ‘ಅತ್ಯಂತ ಕಿರಿಯ’ ಕ್ಯಾಬಿನೆಟ್ ಆಗಿರುತ್ತದೆ. ಒಬಿಸಿಗಳು, ಎಸ್ಸಿಗಳು ಮತ್ತು ಎಸ್ಟಿಗಳ ದಾಖಲೆಯ ಪ್ರಾತಿನಿಧ್ಯ ಮತ್ತು ಹೆಚ್ಚಿನ ಮಹಿಳಾ ಆಯ್ಕೆಗಳನ್ನು ಹೊಂದಿರುತ್ತದೆ. ಇಂದು ಸಂಜೆ 6 ಗಂಟೆಗೆ ಘೋಷಿಸಲಿರುವ ಹೊಸ ಸಚಿವ ಸಂಪುಟವು ‘ಸೋಶಿಟ್, ಪಿಡಿಟ್, ವ್ಯಾಂಚ್ ಮತ್ತು ಆದಿವಾಸಿ’ (ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳು) ಪ್ರಾತಿನಿಧ್ಯದ ಬಗ್ಗೆ ವಿಶೇಷ ಗಮನ ಹರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಅನುಸೂಚಿ ಜಾತಿ ಸಮುದಾಯಗಳ ದಾಖಲೆಯ ಪ್ರಾತಿನಿಧ್ಯಕ್ಕೂ ಕೌನ್ಸಿಲ್ ಸಾಕ್ಷಿಯಾಗಲಿದೆ ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಸುಮಾರು 24 ಸಚಿವರನ್ನು ಸೇರಿಸಿಕೊಳ್ಳ ಲಾಗುವುದು ಎಂಬುದಾಗಿ ತಿಳಿದು ಬಂದಿದೆ.

ಪ್ರತಿಯೊಂದು ರಾಜ್ಯ ಮತ್ತು ಅವುಗಳ ಸಂಬಂಧಿತ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸಿ, ಸಣ್ಣ ಸಮುದಾಯಗಳಿಗೂ ಪ್ರಾತಿನಿಧ್ಯ ವನ್ನು ಒದಗಿಸುವುದು ಸರ್ಕಾರದ ಯೋಜನೆಯಾಗಿದೆ.

ಕೌನ್ಸಿಲ್ ನಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲಾಗುವುದು ಮತ್ತು ನಾಯಕರ ಸರಾಸರಿ ವಯಸ್ಸು ಸ್ವತಂತ್ರ ಭಾರತದ ಇತಿಹಾಸದಲ್ಲಿ ಕಡಿಮೆ ಇರುತ್ತದೆ ಎಂದು ಮೂಲಗಳು ತಿಳಿಸಿವೆ.

Share This Article
Leave a comment