ರಾಜ್ಯ ಸರ್ಕಾರ ಈ ಶಿಫಾರಸಿಗೆ ಒಪ್ಪಿಗೆ ನೀಡಿದರೆ, 2.45 ಲಕ್ಷ ಸರ್ಕಾರಿ ನೌಕರರ ಹೋರಾಟಕ್ಕೆ ಬಹುದಿನಗಳ ನಿರೀಕ್ಷೆಯ ಜಯ ಸಿಗಲಿದೆ.
ಸರ್ಕಾರಿ ನೌಕರರು ಒಪಿಎಸ್ ಮರು ಜಾರಿಗೆ ಆಗಾಗ ಪ್ರತಿಭಟನೆ ನಡೆಸುತ್ತಿದ್ದರು. ಈ ಹಿನ್ನಲೆಯಲ್ಲಿ ಸರ್ಕಾರ ಸಮಿತಿ ರಚಿಸಿದ್ದು, ಮಾರ್ಚ್ ಅಂತ್ಯದೊಳಗೆ ಅಥವಾ 15 ದಿನಗಳಲ್ಲಿ ವರದಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವರದಿಯಲ್ಲಿ ಒಪಿಎಸ್ ಜಾರಿಗೆ ಪೂರಕ ಅಂಶಗಳನ್ನು ಉಲ್ಲೇಖಿಸಿ ಶಿಫಾರಸು ಮಾಡಲಾಗುವುದು.
2006ರ ಏಪ್ರಿಲ್ ಮೊದಲಿನ ನೇಮಕಾತಿ ಅಧಿಸೂಚನೆಯ ನಂತರ ಸೇರ್ಪಡೆಯಾದ 13,500 ನೌಕರರನ್ನು ಎನ್‌ಪಿಎಸ್‌ನಿಂದ ಹೊರತುಪಡಿಸಿ ಒಪಿಎಸ್ ವ್ಯಾಪ್ತಿಗೆ ಒಳಪಡಿಸಲು ರಾಜ್ಯ ಸರ್ಕಾರ ಈಗಾಗಲೇ ಆದೇಶಿಸಿದೆ. ಉಳಿದ ನೌಕರರು ಸಹ ಒಪಿಎಸ್‌ಗೆ ಒಳಪಡಿಸಲು ಶಿಫಾರಸು ಮಾಡುವ ಸಾಧ್ಯತೆಯಿದೆ.
ಇದೀಗ, ರಾಜಸ್ಥಾನ, ಪಂಜಾಬ್, ಹಿಮಾಚಲ ಪ್ರದೇಶ, ಛತ್ತೀಸ್ಗಢ ರಾಜ್ಯಗಳಲ್ಲಿ ಹಳೇ ಪಿಂಚಣಿ ಮರು ಜಾರಿಗೆ ತರಲಾಗಿದೆ.
ಒಪಿಎಸ್ ಜಾರಿಯಾದಲ್ಲಿ ನೌಕರರಿಗೆ ನಿವೃತ್ತಿಯ ವೇಳೆಗೆ ಹೊಂದಿದ್ದ ಮೂಲ ವೇತನದ ಶೇಕಡಾ 50 ರಷ್ಟು ಪಿಂಚಣಿ ನೀಡಲಾಗುವುದು. ಜೊತೆಗೆ, ತುಟ್ಟಿ ಭತ್ಯೆ, ಸೇವಾ ಅವಧಿಯ ಕೊನೆಯ 10 ತಿಂಗಳ ಸರಾಸರಿ ವೇತನ, ಅಥವಾ ಎರಡರಲ್ಲಿ ನೌಕರರಿಗೆ ಅನುಕೂಲವಾದ ಆಯ್ಕೆ ನೀಡಲಾಗುತ್ತದೆ.
ಹಳೆಯ ಪಿಂಚಣಿ ಯೋಜನೆಯ ಪ್ರಮುಖ ಅಂಶವೆಂದರೆ, ಉದ್ಯೋಗಿಗಳು ಪಿಂಚಣಿಗೆ ಯಾವುದೇ ಕೊಡುಗೆ ನೀಡಬೇಕಾಗದು. ನಿವೃತ್ತಿಯ ನಂತರ, ಕುಟುಂಬಕ್ಕೂ ಪಿಂಚಣಿ ಖಾತರಿ ಇರಲಿದೆ. ನಿವೃತ್ತಿ ಪಡೆದ ನೌಕರರು ಮೃತರಾದರೆ, ಅವರ ಅವಲಂಬಿತರಿಗೂ ಪಿಂಚಣಿ ಮುಂದುವರಿಯುವ ವ್ಯವಸ್ಥೆ ಮಾಡಲಾಗುವುದು.
ಇದನ್ನು ಓದಿ -ಬೆಂಗಳೂರು-ಮಂಗಳೂರು ಸೇರಿ 15 ಹೊಸ ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣ: ಇಲ್ಲಿದೆ ಸಂಪೂರ್ಣ ವಿವರ
ಈ ಮೂಲಕ ಒಪಿಎಸ್ ಹೋರಾಟಕ್ಕೆ ಜಯ ಸಿಗುವ ಲಕ್ಷಣಗಳು ಪ್ರಬಲಗೊಂಡಿವೆ, ಮತ್ತು ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರದ ಅಂತಿಮ ನಿರ್ಧಾರದ ನಿರೀಕ್ಷೆಯಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು